Karnataka Assembly Elections: ಈ ವರ್ಷವೇ ನಡೆಯುತ್ತಾ ರಾಜ್ಯ ವಿಧಾನಸಭಾ ಚುನಾವಣೆ?

*ಅವಧಿ ಪೂರ್ವ ಚುನಾವಣೆಗೆ ಬಿಜೆಪಿ ಸಿದ್ಧತೆ
*ನ.27ಕ್ಕೆ ರಾಜ್ಯ ವಿಧಾನಸಭೆ ಚುನಾವಣೆ: ಡಿಕೆಶಿ ಭವಿಷ್ಯ
*ರಾಜ್ಯಕ್ಕೆ ಒಂದೇ ದಿನ ರಾಹುಲ್‌, ಅಮಿತ ಶಾ ಭೇಟಿ

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 30): ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಥಳೀಯ ಹಾಗೂ ರಾಷ್ಟ್ರೀಯ ಪಕ್ಷಗಳು ಸಕಲ ತಯಾರಿ ನಡೆಸುತ್ತಿದ್ದು ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗಿದೆ. ಈ ನಡುವೆ ಇದೇ ವರ್ಷ ಚುನಾವಣೆ ನಡೆಯಲಿದೆ ಎಂಬಂತೆ ರಾಜಕೀಯ ನಾಯಕರು ಹೇಳಿಕೆ ನೀಡುತ್ತಿದ್ದಾರೆ. "ರಾಜ್ಯದಲ್ಲಿ ಯಾವಾಗ ಚುನಾವಣೆ ನಡೆಸಿದರೂ ಎದುರಿಸಲು ಕಾಂಗ್ರೆಸ್‌ ಪಕ್ಷ ಸಿದ್ಧವಾಗಿದೆ. ನಮ್ಮ ಮೂಲಗಳ ಪ್ರಕಾರ ನ.27ರಂದು ವಿಧಾನಸಭಚುನಾವಣೆ ನಡೆಸಲು ಸಿದ್ಧತೆ ನಡೆದಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಇತ್ತ "ಚುನಾವಣೆ ಎದುರಿಸಲು ಸಿದ್ದರಿದ್ದೇವೆ, ಜನ ನಮ್ಮ ಪರವಾಗಿದ್ದಾರೆ" ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ಇದನ್ನೂ ಓದಿ:Karnataka Election ನ.27ಕ್ಕೆ ರಾಜ್ಯ ವಿಧಾನಸಭೆ ಚುನಾವಣೆ: ಡಿಕೆಶಿ ಭವಿಷ್ಯ!

ಈ ನಡುವೆ ಕಾಂಗ್ರೆಸ್‌ ವರಿಷ್ಟ ರಾಹುಲ್‌ ಗಾಂಧಿ ಹಾಗೂ ಕೇಂದ್ರದ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್‌ ಶಾ ರಾಜ್ಯಕ್ಕೆ ಒಂದೇ ದಿನ ಭೇಟಿ ನೀಡಲಿದ್ದಾರೆ. ಬಿಜೆಪಿಗೆ ದಕ್ಷಿಣದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಕರ್ನಾಟಕದಲ್ಲಿ ಪಂಚರಾಜ್ಯಗಳ ಚುನವಾಣೆ ಫಲಿತಾಂಶ ಬಳಿಕ ರಾಜಕೀಯ ಚಟುವಟಿಕೆಗಳಿ ಗರಿಗೆದರಿವೆ. ದೇಶಾದ್ಯಂತ ಸೋತು ಸುಣ್ಣವಾಗಿರುವ ಕಾಂಗ್ರೆಸ್‌ಗೆ ತನ್ನ ಬಲ ಪ್ರದರ್ಶಿಸಲು ಕರ್ನಾಟಕ ವೇದಿಕೆಯಾಗಿದ್ದರೇ ಇತ್ತ ಪಂಚರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿರುವ ಬಿಜೆಪಿ ಮತ್ತೊಂದು ರಾಜ್ಯ ಗೆದ್ದು ಪಕ್ಷ ಬಲಪಡಿಸಲು ಇದೊಂದು ಉತ್ತಮ ಅವಕಾಶ. ಈ ಎಲ್ಲ ಬೆಳವಣಿಗೆಗಳು ರಾಜ್ಯದಲ್ಲಿ ಇದೇ ವರ್ಷ ಚುನಾವಣೆ ನಡೆಯಬಹುದು ಎಂಬ ವದಂತಿಗಳಿಗೆ ಪುಷ್ಟಿ ನೀಡುತ್ತಿವೆ. ಈ ಕುರಿತ ಒಂದು ವರದಿ ಇಲ್ಲಿದೆ. 

Related Video