Political Express: ಕಾರ್ಕಳದಲ್ಲಿ ಮುತಾಲಿಕ್‌ ಭರ್ಜರಿ ಪ್ರಚಾರ!

ಪಾಲಿಟಿಕಲ್‌ ಎಕ್ಸ್‌ಪ್ರೆಸ್‌ನಲ್ಲಿ ಕರ್ನಾಟಕ ಕುರುಕ್ಷೇತ್ರ ಕಾವೇರಿರುವ ಸಂದರ್ಭದಲ್ಲಿ 31 ಜಿಲ್ಲೆಗಳ 224 ಕ್ಷೇತ್ರಗಳ ಪಾಲಿಟಿಕಲ್‌ ಸುದ್ದಿಗಳನ್ನು ಸಂಪೂರ್ಣವಾಗಿ ತಿಳಿಸಲಾಗಿದೆ.

Share this Video
  • FB
  • Linkdin
  • Whatsapp

ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಶುರು ಮಾಡಿದ್ದಾರೆ. ಹೆಬ್ರಿ ತಾಲೂಕನ್ನು ಟಾರ್ಗೆಟ್ ಮಾಡಿ ಮುತಾಲಿಕ್ ಮತ ಪ್ರಚಾರ ಮಾಡುತ್ತಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಹೆಬ್ರಿ, ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರುವ ತಾಲೂಕು. ಗ್ರಾಮೀಣ ಪ್ರದೇಶ ಆಗಿರುವುದರಿಂದ ಕೆಲವು ಮೂಲಭೂತ ಸೌಕರ್ಯಗಳ ಕೊರತೆ ಇರುವ ಕಡೆ ಮುತಾಲಿಕ್ ಹೋಗಿ ಜನರಲ್ಲಿ ಭರವಸೆ ತುಂಬಿಸುತ್ತಿದ್ದಾರೆ. ಸೇತುವೆ ರಸ್ತೆ ಕಾಮಗಾರಿಗಳನ್ನು ಮಾಡಿಕೊಡುವ ಭರವಸೆಗಳನ್ನು ಕೊಡುತ್ತಿದ್ದಾರೆ. ಕಾರ್ಕಳ ತಾಲೂಕಿಗೆ ಹೋಲಿಸಿದರೆ ಹೆಬ್ರಿ ತಾಲೂಕು ಅಭಿವೃದ್ಧಿಯಲ್ಲಿ ಹಿಂದೆ ಇದೆ ಎಂಬುದು ಪ್ರಮೋದ್ ಮುತಾಲಿಕ್ ಆರೋಪ.

Related Video