Political Express: ಸ್ಫರ್ಧೆ ನಿಗೂಢತೆ ಮಧ್ಯೆ ಸಿದ್ದು ಅಚ್ಚರಿ ನಡೆ...

ಪಾಲಿಟಿಕಲ್‌ ಎಕ್ಸ್‌ಪ್ರೆಸ್‌ನಲ್ಲಿ ಕರ್ನಾಟಕ ಕುರುಕ್ಷೇತ್ರ ಕಾವೇರಿರುವ ಸಂದರ್ಭದಲ್ಲಿ 31 ಜಿಲ್ಲೆಗಳ 224 ಕ್ಷೇತ್ರಗಳ ಪಾಲಿಟಿಕಲ್‌ ಸುದ್ದಿಗಳನ್ನು ಸಂಪೂರ್ಣವಾಗಿ ತಿಳಿಸಲಾಗಿದೆ.

Share this Video
  • FB
  • Linkdin
  • Whatsapp

ಕೋಲಾರದಿಂದ ಸ್ಫರ್ಧೆ ಕೈಬಿಟ್ಟ ಬೆನ್ನಲ್ಲೆ ಅಚ್ಚರಿ ಮೂಡಿಸಿರೋ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಸ್ವಕ್ಷೇತ್ರ ಬಾದಾಮಿ ಪ್ರವಾಸ ಕೈಗೊಂಡಿದ್ದು,ರೋಡ್ ಶೋ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಬಾದಾಮಿ ಜನರ ನಾಡಿ ಮಿಡಿತ ಅರಿಯಲಿದ್ದಾರೆ.ಈಗಾಗಲೇ ಕೋಲಾರಕ್ಕಿಂತಲೂ ಸಿದ್ದು ಸ್ಫರ್ಧೆಗೆ ಸೇಫ್ ಬಾದಾಮಿ ಮತಕ್ಷೇತ್ರ ವಾಗಿದ್ದು, ಬಾದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡದೇ ಹೋದರೆ ಕಾಂಗ್ರೆಸ್ಸಿಗೆ ಭಿನ್ನಮತದ ಒಳಬೇಗುದಿ ತಟ್ಟಲಿದೆ.ಇನ್ನು ಬಾದಾಮಿ ಪ್ರವಾಸದ ವೇಳೆ ಅಂದಾಜು 500 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಲಿದ್ದು, ಬಾದಾಮಿ - ಕೆರೂರ ಪಟ್ಟಣಗಳ ಶಾಶ್ವತ ಕುಡಿಯುವ ನೀರಿನ ಸರಬರಾಜು ಯೋಜನೆ ಉದ್ಘಾಟನೆ ಮಾಡಲಿದ್ದಾರೆ.

Related Video