ನಾಳೆ ಪ್ರಧಾನಿ ಮೋದಿ ರೋಡ್‌ ಶೋ ಹಿನ್ನೆಲೆ: ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಪೊಲೀಸರಿಂದ ನೋಟಿಸ್‌

ಶನಿವಾರ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್​ ಶೋ ನಡೆಯಲಿದ್ದು, ಇದಕ್ಕೂ ಮುನ್ನ ಈ ಹಾದಿಯಲ್ಲಿರುವ ಮನೆಗಳಿಗೆ ಹಾಗೂ ಅಪಾರ್ಟ್​ಮೆಂಟ್​ ನಿವಾಸಿಗಳಿಗೆ ಪೊಲೀಸರು ನೋಟಿಸ್​ ನೀಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು: ನಾಳೆ ಪ್ರಧಾನಿ ಮೋದಿ ರೋಡ್ ಶೋ ಇದ್ದು, ಈ ಹಿನ್ನೆಲೆ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಪೊಲೀಸರು ನೋಟಿಸ್‌ ಕೊಟ್ಟಿದ್ದಾರೆ. ಮನೆಗಳ ಬಾಲ್ಕನಿ, ಟೆರೇಸ್‌ ಮೇಲೆ ನಿಂತು ರೋಡ್‌ ಶೋ ನೋಡುವಂತಿಲ್ಲ. ಮೋದಿ ರ್ಯಾಲಿ ಮುಗಿಯುವವರೆಗೆ ಜನರು ಅಪಾರ್ಟ್‌ಮೆಂಟ್‌ನಿಂದ ತಮ್ಮ ವಾಹನಗಳನ್ನು ಹೊರಗೆ ತೆಗೆಯುವಂತಿಲ್ಲ. ಕಟ್ಟಡದ ಒಳಗೆ ಮತ್ತು ಹೊರಗೆ ಹೋಗುವ ಮಾರ್ಗವನ್ನು ಬಂದ್‌ ಮಾಡಬೇಕು. ಅಲ್ಲದೇ ಅಪಾರ್ಟ್‌ಮೆಂಟ್‌ ಒಳಗೆ ಅಪರಿಚಿತ ವ್ಯಕ್ತಿಗಳಿಗೆ ಪ್ರವೇಶ ನೀಡಬಾರದು. ಇನ್ನೂ ರ್ಯಾಲಿ ನೋಡಬಯಸುವವರು ನಿಗದಿತ ಸ್ಥಳಕ್ಕೆ ಬಂದು ನೋಡಬಹುದಾಗಿದೆ. ಮೋದಿ ಅವರ ಭದ್ರತೆ ದೃಷ್ಟಿಯಿಂದ ಪೊಲೀಸರ ಜೊತೆ ಸಹಕರಿಸುವಂತೆ ನಿವಾಸಿಗಳಿಗೆ ಮನವಿ ಮಾಡಲಾಗಿದೆ. ಪುಟ್ಟೇನಹಳ್ಳಿ ಪೊಲೀಸರು ಜೆ.ಪಿ ನಗರ ನಿವಾಸಿಗಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video