Asianet Suvarna News Asianet Suvarna News

Party Rouds: ಯಾವ ಕ್ಷೇತ್ರದಲ್ಲಿ ನಿಲ್ತಾರೆ ಸಿದ್ಧರಾಮಯ್ಯ?

ಹೆಚ್ಚೂ ಕಡಿಮೆ ಸಿದ್ಧರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡೋದಿಲ್ಲ ಅನ್ನೋದು ಖಚಿತವಾಗಿದೆ. ಇನ್ನು ವರುಣಾದಲ್ಲಿ ನಿಲ್ಲೋಕೆ ಸ್ವತಃ ಸಿದ್ಧರಾಮಯ್ಯ ಅವರಿಗೆ ಮನಸ್ಸಿಲ್ಲ.

ಬೆಂಗಳೂರು (ಮಾ.20): ಹೆಚ್ಚೂ ಕಡಿಮೆ ಸಿದ್ಧರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡೋದಿಲ್ಲ ಅನ್ನೋದು ಖಚಿತವಾಗಿದೆ. ಇನ್ನು ವರುಣಾದಲ್ಲಿ ನಿಲ್ಲೋಕೆ ಸ್ವತಃ ಸಿದ್ಧರಾಮಯ್ಯ ಅವರಿಗೆ ಮನಸ್ಸಿಲ್ಲ. ಈ ಬೆಳವಣಿಗೆಯ ಬೆನ್ನಲ್ಲೇ ಕೋಲಾರ ಜಿಲ್ಲೆಯ ಪ್ರಮುಖ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಕೋಲಾರದಿಂದಲೇ ಸ್ಪರ್ಧಿಸಬೇಕು ಎಂಬ ಒತ್ತಡವನ್ನು ಸಿದ್ದರಾಮಯ್ಯ ಅವರ ಮೇಲೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆದರೆ, ರಾಹುಲ್‌ ಗಾಂಧಿ ಅವರೇ ನೇರ ಸೂಚನೆ ನೀಡಿರುವುದರಿಂದ ಕೋಲಾರ ನಾಯಕರ ಒತ್ತಡಕ್ಕೆ ಸಿದ್ದರಾಮಯ್ಯ ಮಣಿಯುವುದು ಕಷ್ಟಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಮೈಸೂರು ಜಿಲ್ಲೆಯ ವರುಣದಲ್ಲಿ ಈಗ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಶಾಸಕರಾಗಿದ್ದಾರೆ. ಇದು ಈ ಹಿಂದೆ ಸಿದ್ದರಾಮಯ್ಯ ಪ್ರತಿನಿಧಿಸಿದ್ದ ಕ್ಷೇತ್ರವಾಗಿದೆ. ಹೀಗಾಗಿ ಸಿದ್ದರಾಮಯ್ಯ ಮತ್ತೆ ಯಾವ ಕ್ಷೇತ್ರದಲ್ಲಿ ನಿಲ್ತಾರೆ ಅನ್ನೋದಕ್ಕೆ ಈ ವಿಡಿಯೋವನ್ನು ವೀಕ್ಷಿಸಿ.

Video Top Stories