Asianet Suvarna News Asianet Suvarna News

Party Rouds: ಪದ್ಮನಾಭನಗರ ಅಥವಾ ಚನ್ನಪಟ್ಟಣ ಎಲ್ಲಿಂದ ಕಣಕ್ಕಿಳಿತಾರೆ ಮೋಹಕ ತಾರೆ ರಮ್ಯಾ!

ಮೋಹಕ ತಾರೆ ರಮ್ಯಾ ಮತ್ತೆ ಪಾಲಿಟಿಕ್ಸ್‌ ಬರ್ತಾರೆ ಎನ್ನುವ ವರದಿಗಳು ಬಂದಿವೆ. ಮೂಲಗಳ ಪ್ರಕಾರ, ಪದ್ಮನಾಭನಗರ ಅಥವಾ ಚನ್ನಪಟ್ಟಣದಲ್ಲಿ ರಮ್ಯಾ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. 

ಬೆಂಗಳೂರು (ಮಾ.20): ಮೋಹಕ ತಾರೆ ರಮ್ಯಾ ಮತ್ತೆ ಪಾಲಿಟಿಕ್ಸ್‌ ಬರ್ತಾರೆ ಎನ್ನುವ ವರದಿಗಳು ಬಂದಿವೆ. ಮೂಲಗಳ ಪ್ರಕಾರ, ಪದ್ಮನಾಭನಗರ ಅಥವಾ ಚನ್ನಪಟ್ಟಣದಲ್ಲಿ ರಮ್ಯಾ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಪದ್ಮನಾಭನಗರದಲ್ಲಿ ಪ್ರಸ್ತುತ ಬಿಜೆಪಿಯ ಆರ್‌.ಅಶೋಕ್‌ ಶಾಸಕರಾಗಿದ್ದಾರೆ. ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಣಕ್ಕಿಳಿಯುವ ಸೂಚನೆ ಇದೆ. ರಮ್ಯಾ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಇನ್ನು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಮುಖ್ಯಮಂತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿಯಿಂದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಸ್ಪರ್ಧೆ ಮಾಡುತ್ತಿದ್ದಾರೆ. ಅವರಿಗೆ ಠಕ್ಕರ್‌ ಕೊಡಲು ಹಾಗೂ ಒಕ್ಕಲಿಗ ಮತಗಳನ್ನು ಸೆಳೆಯಲು ರಮ್ಯಾ ಅವರನ್ನು ಸ್ಪರ್ಧೆಗಿಳಿಸಲು ಚಿಂತನೆ ಮಾಡಲಾಗಿದೆ. ಕಾಂಗ್ರೆಸ್ ಪಾಳಯದಲ್ಲಿ ಈ ಬಗ್ಗೆ ಗಂಭೀರವಾಗಿ ಚರ್ಚೆಯನ್ನು ಮಾಡಲಾಗುತ್ತಿದೆ. ಶೀಘ್ರದಲ್ಲೇ ಈ ಕುರಿತು ಅಂತಿಮ‌ ನಿರ್ಧಾರಗಳು ಪ್ರಕಟವಾಗಲಿದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.

Video Top Stories