Asianet Suvarna News Asianet Suvarna News

Siddaramaiah: ಜೆಡಿಎಸ್ ಅಭ್ಯರ್ಥಿ ಗೆಲ್ಲಲು 45 ಮತಗಳಿಲ್ಲ, ಆತ್ಮಸಾಕ್ಷಿ ಅಂತಾರಲ್ಲ, ಆತ್ಮಸಾಕ್ಷಿ ಅನ್ನೋ ಮತ ಇದ್ಯಾ ?: ಸಿಎಂ

ನಮ್ಮಿಂದ ಯಾವುದೇ ಅಡ್ಡಮತದಾನ ನಡೆಯುವುದಿಲ್ಲ. ನಮ್ಮ ಮೂರು ಅಭ್ಯರ್ಥಿಗಳು ಗೆಲ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳೀದ್ದಾರೆ.
 

ಜೆಡಿಎಸ್‌ನವರು ಆತ್ಮಸಾಕ್ಷಿ ಮತ ಅಂತಾರಲ್ಲ. ಅವರ ಅಭ್ಯರ್ಥಿ ಗೆಲ್ಲಲು 45 ಮತಗಳಿಲ್ಲ. ಆತ್ಮಸಾಕ್ಷಿ ಅಂತಾರಲ್ಲ, ಆತ್ಮಸಾಕ್ಷಿ ಅನ್ನೋ ಮತ ಇದ್ಯಾ ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ಪ್ರಶ್ನಿಸಿದ್ದಾರೆ. ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಮತ ಹಾಕ್ತಾರೆ. ಕಾಂಗ್ರೆಸ್ (Congress)ಶಾಸಕರಿಗೆ ಜೆಡಿಎಸ್ (JDS)- ಬಿಜೆಪಿ(BJP) ಆಮಿಷವೊಡ್ಡುತ್ತಿದೆ. ಆಮಿಷವೊಡ್ಡಿದವರ ವಿರುದ್ಧ FIR ದಾಖಲಿಸಲಾಗಿದೆ. ಜೆಡಿಎಸ್‌ಗೆ ಇರೋದೇ 19 ಮತಗಳು. ಅವರು ಕ್ಯಾಂಡಿಡೇಟ್ ಹಾಕಬೇಕಿರಲಿಲ್ಲ ಆದ್ರೂ ಹಾಕಿದ್ದಾರೆ ಅಷ್ಟೇ. ನಮ್ಮ ಮೂರು ಅಭ್ಯರ್ಥಿಗಳು ಗೆಲ್ತಾರೆ ಎಂದು ಸಿಎಂ ಗೆಲ್ಲುವ ಭರವಸೆ ವ್ಯಕ್ತಪಡಿಸಿದರು.

ಇದನ್ನೂ ವೀಕ್ಷಿಸಿ:  DK Shivakumar: ಕಾಂಗ್ರೆಸ್‌ಗೆ ಆತ್ಮಸಾಕ್ಷಿಯ ವೋಟು ಹಾಕ್ತಾರೆ, ದುಡ್ಡಿದೆ ಎಂದು ಶಾಸಕರನ್ನ ಬೆದರಿಸಿದ್ರೆ ಆಗಲ್ಲ: ಡಿಕೆಶಿ

Video Top Stories