Asianet Suvarna News Asianet Suvarna News

ಮೋದಿ ವಿರುದ್ಧ ವಿಪಕ್ಷಗಳ ಮಹಾಘಟಬಂಧನ್‌ ಅಸ್ತ್ರ: ಬೆಂಗಳೂರಿನಲ್ಲಿ 26 ಪಕ್ಷಗಳ ಸಭೆ

ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಯನ್ನು ಸೋಲಿಸಲು ವಿಪಕ್ಷಗಳು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಿವೆ.
 

ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ(Loksabha election) ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ವಿಪಕ್ಷಗಳು ಇಂದು ಬೆಂಗಳೂರಿನಲ್ಲಿ(Bengaluru) ಎರಡನೇ ಸಭೆ ನಡೆಸುತ್ತಿವೆ. ಈ ಸಭೆಯಲ್ಲಿ 26 ಪಕ್ಷಗಳು ಭಾಗಿಯಾಗಲಿವೆ. ಈ ಸಭೆ ವಿಪಕ್ಷಗಳಿಗೆ(Opposition meet) ಗೇಮ್‌ ಚೇಂಜರ್‌ ಆಗಿದೆ. ಯುನಿಟೆಡ್‌ ವಿ ಸ್ಟ್ಯಾಂಡ್‌ ಘೋಷವಾಕ್ಯದಡಿ ಸಮಾಲೋಚನೆ ನಡೆಸಲಾಗುತ್ತಿದೆ. ಬಿಹಾರದ ಪಾಟ್ನಾದಲ್ಲಿ(Patna) ವಿರೋಧ ಪಕ್ಷಗಳು ಈಗಾಗಲೇ ಮೊದಲ ಸಭೆಯನ್ನು ನಡೆಸಿವೆ. ಇಂದಿನ ಎರಡನೇ ಸಭೆಯಲ್ಲಿ ಮಹಾಮೈತ್ರಿ ಬಗ್ಗೆ ಮಹತ್ವದ ನಿರ್ಣಯಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಈ 26 ಪಕ್ಷಗಳ ಮೈತ್ರಿಕೂಟಕ್ಕೆ ಹೊಸ ಹೆಸರು ನಾಮಕರಣ ಮಾಡುವ ಸಾಧ್ಯತೆ ಇದೆ. ಬೆಂಗಳೂರಿನ ತಾಜ್‌ ವೆಸ್ಟ್‌ಂಡ್‌ನಲ್ಲಿ ಮಹಾಘಟಬಂಧನ್‌ ಸಭೆ ನಡೆಯಲಿದೆ.

ಇದನ್ನೂ ವೀಕ್ಷಿಸಿ:  'ಲೋಕ'ಸಮರ ಗೆಲ್ಲಲು ಬಿಜೆಪಿಯಿಂದ ಹೊಸ ಅಸ್ತ್ರ: ಹ್ಯಾಟ್ರಿಕ್‌ ಜಯಕ್ಕೆ ಎನ್‌ಡಿಎಯಿಂದ ರಣತಂತ್ರ

Video Top Stories