
'ಲೋಕ'ಸಮರ ಗೆಲ್ಲಲು ಬಿಜೆಪಿಯಿಂದ ಹೊಸ ಅಸ್ತ್ರ: ಹ್ಯಾಟ್ರಿಕ್ ಜಯಕ್ಕೆ ಎನ್‌ಡಿಎಯಿಂದ ರಣತಂತ್ರ
ಲೋಕಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಜಯ ಸಾಧಿಸಲು ನಿರ್ಧರಿಸಿರುವ ಬಿಜೆಪಿ ವಿಪಕ್ಷಗಳನ್ನು ಮಣಿಸಲು ರಣತಂತ್ರವನ್ನು ಹೂಡುತ್ತಿದೆ.
ಲೋಕಸಭಾ ಚುನಾವಣೆ ಗೆಲ್ಲಲು ಎನ್‌ಡಿಎ(NDA) ಇಂದು ಪ್ರಾದೇಶಿಕ ಪಕ್ಷಗಳೊಂದಿಗೆ ದೆಹಲಿಯಲ್ಲಿ ಸಭೆ(Meeting) ನಡೆಸಲಿದೆ. ಇತ್ತ ಬೆಂಗಳೂರಿನಲ್ಲಿ ವಿಪಕ್ಷಗಳ ಮೈತ್ರಿ ಸಭೆ(Opposition Meet) ನಡೆಯುತ್ತಿದೆ. ಘಟಾನುಘಟಿ ನಾಯಕರು ಬೆಂಗಳೂರಿನ(Bengaluru) ಖಾಸಗಿ ಹೋಟೆಲ್‌ನಲ್ಲಿ ಸೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ(PM Modi) ನೇತೃತ್ವದಲ್ಲಿ ಎನ್‌ಡಿಎ ಮಿತ್ರ ಪಕ್ಷಗಳ ಸಭೆ ನಡೆಯಲಿದೆ. ಈ ಬಾರಿ ಹ್ಯಾಟ್ರಿಕ್ ಜಯ ಸಾಧಿಸಲು ಎನ್‌ಡಿಎ ರಣತಂತ್ರವನ್ನು ಹೂಡುತ್ತಿದೆ. ಬಿಜೆಪಿ ನೇತೃತ್ವದ ಸಭೆಗೆ 38 ಪಕ್ಷದ ಮುಖಂಡರು ಭಾಗಿಯಾಗಲಿದ್ದಾರೆ. ಎನ್‌ಡಿಎ ಕೂಟದಿಂದ ಹೊರನಡೆದಿದ್ದ ಪಕ್ಷಗಳ ಮನವೊಲಿಕೆಯನ್ನು ಮಾಡಲಾಗುತ್ತದೆ. ಈ ಬಾರಿ ಎನ್‌ಡಿಎ ಕೂಟದಲ್ಲಿ ಗುರುತಿಸಿಕೊಳ್ಳದ ಪಕ್ಷಗಳಿಗೂ ಗಾಳ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ವೀಕ್ಷಿಸಿ: ಇಂದಿನಿಂದ ಅಧಿಕ ಶ್ರಾವಣ ಮಾಸ ಆರಂಭ: ಏನು ಮಾಡಬೇಕು, ಮಾಡಬಾರದು ?