ಜಗದೀಶ್‌ ಶೆಟ್ಟರ್‌ ಸ್ಪರ್ಧೆಗೆ ‘ಲೋಕಲ್’ ಸಿಟ್ಟು..ಬೆಳಗಾವಿಯಲ್ಲಿ ಕಾರ್ಯಕರ್ತರಿಂದ ಗೋ ಬ್ಯಾಕ್ ಅಭಿಯಾನ!

ಶೆಟ್ಟರ್ ಹೆಸರು ಫೈನಲ್ ಬೆನ್ನೆಲ್ಲೇ ಬೆಳಗಾವಿ ಬಿಜೆಪಿಯಲ್ಲಿ ಭಿನ್ನಮತ
ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಶೆಟ್ಟರ್ ಹೆಸರು ಇರುತ್ತಾ ಇರಲ್ವಾ? 
ಡಾ. ಪ್ರಭಾಕರ ಕೋರೆ ನಿವಾಸದಲ್ಲಿ ಬಂಡಾಯ ನಾಯಕರ ಸಭೆ 

Share this Video
  • FB
  • Linkdin
  • Whatsapp

ದಿನೇ ದಿನೇ ಬೆಳಗಾವಿ(Belagavi) ಟಿಕೆಟ್ ಫೈಟ್‌ ಕಾವೇರುತ್ತಿದ್ದು, ಬೆಳಗಾವಿ ಸ್ಪರ್ಧೆಗೆ ಜಗದೀಶ್ ಶೆಟ್ಟರ್(Jagadish Shettar) ಹೆಸರು ಫೈನಲ್ ಆಗಲಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಭಿನ್ನಮತ ಸ್ಫೋಟವಾಗಿದೆ. ಅಧಿಕೃತ ಘೋಷಣೆಗೂ ಮುನ್ನವೇ ಜಗದೀಶ್ ಶೆಟ್ಟರ್‌ಗೆ ಶಾಕ್ ನೀಡಲಾಗಿದ್ದು, ಜಾರಕಿಹೊಳಿ, ಅಂಗಡಿ ಕುಟುಂಬ ಹೊರಗಿಟ್ಟು ಸಭೆ‌ ನಡೆಸಿದ ನಾಯಕರು. ಪ್ರಭಾಕರ ಕೋರೆ(Prabhakar Kore) ನಿವಾಸದಲ್ಲಿ ಬಿಜೆಪಿ(BJP) ನಾಯಕರು ಸಭೆ ನಡೆಸಿದ್ದಾರೆ. ಬೆಳಗಾವಿಯಿಂದ ಮಾಜಿ ಸಿಎಂ ಶೆಟ್ಟರ್ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿದ್ದು, ಸ್ಥಳೀಯರಿಗೆ ಟಿಕೆಟ್ ಕೊಡಲು ವರಿಷ್ಠ ಗಮನಕ್ಕೆ ತರಲು ತೀರ್ಮಾನ ಮಾಡಲಾಗಿದೆ. ಈರಣ್ಣ ಕಡಾಡಿ, ಶಾಸಕ ಅಭಯ್ ಪಾಟೀಲ, ಅನಿಲ್ ಬೆನಕೆ, ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಡಾ.‌ವಿಶ್ವನಾಥ್ ಪಾಟೀಲ್, ವಿರೂಪಾಕ್ಷ ‌ಮಾಮನಿ, ಧನಂಜಯ್ ಜಾಧವ್ ಸಿಕ್ರೇಟ್ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದರು. ಈರಣ್ಣ ಕಡಾಡಿ ಮೂಲಕ ವರಿಷ್ಠರ ಮೇಲೆ ಒತ್ತಡಕ್ಕೆ ತೀರ್ಮಾನ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  Modi in Shivamogga:ಮೋದಿ ಕಾರ್ಯಕ್ರಮಕ್ಕೆ ಹೋಗ್ತಾರಾ ರೆಬೆಲ್ ನಾಯಕ ? ಸಂಧಾನಕ್ಕೆ ಬಂದವರನ್ನ ಕೂರಿಸಿ ಹೊರಗೆ ಹೋಗಿದ್ದ ಈಶ್ವರಪ್ಪ!

Related Video