ರಾಜಕಾರಣಿಗಳ ಬಹಿರಂಗ ಪ್ರಚಾರಕ್ಕೆ ಇಂದು ತೆರೆ: ನಾಳೆಯಿಂದ ಮನೆ ಮನೆಗೆ ತೆರಳಿ ಮತಯಾಚನೆ

ಹೈವೋಲ್ಟೇಜ್‌ ಕುರುಕ್ಷೇತ್ರದಲ್ಲಿ ಇಂದು ಕೊನೆಯ ಆಟ
ಸಂಜೆ 6 ಗಂಟೆಗೆ ನಾಯಕರ ಬಹಿರಂಗ ಪ್ರಚಾರಕ್ಕೆ ತೆರೆ
ಅಭ್ಯರ್ಥಿಗಳ ಕ್ಯಾಂಪೇನ್‌ ಮನೆ ಮನೆ ಪ್ರಚಾರಕಷ್ಟೇ ಸೀಮಿತ

First Published May 8, 2023, 10:44 AM IST | Last Updated May 8, 2023, 10:44 AM IST

ರಾಜ್ಯ ಚುನಾವಣಾ ರಣಕಣ ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದ್ದು,ಇಂದು ಸಂಜೆ ಆರು ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. ಬರೋಬ್ಬರಿ 40 ದಿನಗಳ ಚುನಾವಣಾ ಬಹಿರಂಗ ಪ್ರಚಾರ ಇಂದು ಅಂತ್ಯವಾಗಲಿದೆ. ನಾಳೆಯಿಂದ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರವನ್ನು ಮಾಡಬೇಕಾಗಿದೆ. ಇಷ್ಟು ದಿನ ಎಲ್ಲಾ ಪಕ್ಷಗಳ ದಿಗ್ಗಜ ನಾಯಕರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ರು. ಇಂದು ಪ್ರಿಯಾಂಕಾ ಗಾಂಧಿ ಚಿಕ್ಕಪೇಟೆಯಲ್ಲಿ ರೋಡ್ ಶೋ ನಡೆಸಲಿದ್ದು, ಬಳಿಕ ವಿಜಯನಗರದಲ್ಲಿ ಮತ್ತೊಂದು ರೋಡ್ ಶೋದಲ್ಲಿ ಭಾಗಿ ಆಗಲಿದ್ದಾರೆ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಕೂಡ ಬೆಂಗಳೂರಿನಲ್ಲಿ ಪ್ರಚಾರ ನಡೆಸುವ ಸಾಧ್ಯತೆ ಇದ್ದು, ಕಾಂಗ್ರೆಸ್ ಕೊನೆಯ ಹಂತದ ಪ್ರಚಾರದ ಸಿದ್ಧತೆ ನಡೆಸಿದೆ.

ಇದನ್ನೂ ವೀಕ್ಷಿಸಿ: ಚುನಾವಣೆ ಹೊತ್ತಲ್ಲಿ ಹುಚ್ಚೆದ್ದು ಕುಣಿತೈತೆ ಕುರುಡು ಕಾಂಚಾಣ: ಎಲ್ಲೆಲ್ಲಿ ಎಷ್ಟೆಷ್ಟು ಸಿಕ್ತು ಗೊತ್ತಾ ?