ಚುನಾವಣೆ ಹೊತ್ತಲ್ಲಿ ಹುಚ್ಚೆದ್ದು ಕುಣಿತೈತೆ ಕುರುಡು ಕಾಂಚಾಣ: ಎಲ್ಲೆಲ್ಲಿ ಎಷ್ಟೆಷ್ಟು ಸಿಕ್ತು ಗೊತ್ತಾ ?

ದಾಖಲೆ ಇಲ್ಲದೆ ಸಾಗಾಟವಾಗ್ತಿತ್ತು ಕೋಟಿಗಟ್ಟಲೆ ದುಡ್ಡು!
ಹಾವೇರಿ ಚೆಕ್ ಪೋಸ್ಟ್ ನಲ್ಲಿ ಸೀಜ್ ಆಗಿತ್ತು ಬೆಳ್ಳಿ ಬಂಗಾರ!
ಅಕ್ರಮವಾಗಿ ಸಾಗಾಟವಾಗ್ತಿತ್ತು 11 ಕೆಜಿ ಬಂಗಾರ, 74 ಕೆಜಿ ಬೆಳ್ಳಿ!
 

First Published May 7, 2023, 6:39 PM IST | Last Updated May 7, 2023, 6:39 PM IST

ರಾಜ್ಯದಲ್ಲಿ ಚುನಾವಣೆಯ ಕಾವು ತೀವ್ರವಾಗ್ತಾ ಇದೆ. ಇನ್ನು ಮೂರೇ ಮೂರು ದಿನಗಳಲ್ಲಿ, ನಾವು ನಮ್ಮ ರಾಜ್ಯದ ಭವಿಷ್ಯವನ್ನ, ಬೆರಳ ತುದಿಯಲ್ಲೇ ಡಿಸೈಡ್ ಮಾಡಿಬಿಟ್ಟಿರ್ತೀವಿ. ಮತ ಹಾಕೋ ಮೂಲಕ, ಮುಂದಿನ ಸರ್ಕಾರ ಯಾವುದಾಗ್ಬೇಕು ಅನ್ನೋ ತೀರ್ಮಾನ ಹೇಳಿರ್ತೀವಿ. ಆದ್ರೆ ಆ ನಮ್ಮ ಮತವನ್ನ ಕೊಂಡುಕೊಳ್ಳೋದಕ್ಕೆ, ಕೆಲವುಯ ಕಸರತ್ತುಗಳು ನಡೀತಲೇ ಇರ್ತಾವೆ. ಇದರ ಭಾಗವಾಗಿಯೇ ಪ್ರತಿ ಸಲ ಎಲೆಕ್ಷನ್ ಬಂದಾಗಲೂ, ದುಡ್ಡು ಅನ್ನೋದು ಹುಚ್ಚು ಹೊಳೆಯಂತೆ ಹರಿಯುತ್ತಿರುತ್ತದೆ. ಅದನ್ನ ತಡೆಯೋದಕ್ಕೆ ಎಷ್ಟೆಷ್ಟೋ ನೀತಿ ನಿಯಮ ಕಠಿಣ ಕ್ರಮವೆಲ್ಲಾ ತಗೊಳ್ತಾರೆ. ಆದ್ರೂ ಕದ್ದು ಮುಚ್ಚಿ ವ್ಯವಹಾರಗಳು ನಡೀತಲೇ ಇರ್ತಾವೆ. ಅಂಥದ್ದನ್ನೂ ಪತ್ತೆ ಹಚ್ಚಿದ ಅಧಿಕಾರಿಗಳಿಗೆ ಅಚ್ಚರಿಯೇ ಎದುರಾಗಿತ್ತು. ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟು ಹಣ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ..