ಅವಿಶ್ವಾಸದ ಅಗ್ನಿಪರೀಕ್ಷೆ..ಮೋದಿಗೋ..? ಮಹಾ ಮೈತ್ರಿಗೋ..?

ಮಣಿಪುರದ ಬಗ್ಗೆ ಮಾತಾಡಿಸಲು ಅವಿಶ್ವಾಸ ಅಸ್ತ್ರ ಪ್ರಯೋಗ!
ವಿಪಕ್ಷಗಳ ಅವಿಶ್ವಾಸ ಮಂಡನೆ ಬಗ್ಗೆ ಮೋದಿ ಹೇಳಿದ್ದೇನು..?
ಪಾರ್ಲಿಮೆಂಟ್ ಒಳಗೆ ರಾಹುಲ್‌ ಗಾಂಧಿ ಫ್ಲೈಯಿಂಗ್ ಕಿಸ್!

First Published Aug 10, 2023, 2:30 PM IST | Last Updated Aug 10, 2023, 2:30 PM IST

ಲೋಕಸಭಾ ಚುನಾವಣಾ ಸಮರಕ್ಕೆ ಬಾಕಿ ಉಳಿದಿರೋದು, ಹತ್ತೋ ಹನ್ನೊಂದೋ ತಿಂಗಳಷ್ಟೆ. ಆದ್ರೆ ಆ ಯುದ್ಧ ಸನ್ನಾಹಕ್ಕೆ ಅದಾಗಲೇ ದೊಡ್ಡ ಮಟ್ಟದ ತಯಾರಿ ನಡೀತಿದೆ. ಪ್ರತಿಯೊಂದು ಪಕ್ಷವೂ, ಗೆದ್ದೇ ಗೆಲ್ಲಬೇಕು ಅನ್ನೋ ಪಣತೊಟ್ಟು ನಿಂತಿದ್ದಾವೆ. ಇಂಥಾ ಸಂದರ್ಭದಲ್ಲಿ, ಈಗ ನಡೀತಿರೋ ಲೋಕಸಭಾ ಚರ್ಚೆಯಲ್ಲಿ, ಮಿನಿ ಸಂಗ್ರಾಮವೇ ಶುರುವಾಗಿಬಿಟ್ಟಿದೆ. ಅಂತೂ ಇಂತೂ ಐನ್ಡಿಐಎ(I.N.D.I.A) ನಾಯಕರೆಲ್ಲಾ ಒಟ್ಟಾಗಿ, ಮೋದಿ(Modi) ವಿರುದ್ಧ ಯುದ್ಧವನ್ನೇ ಸಾರಿದ್ದಾರೆ. ಈಗ ನಡೀತಿರೋ ಸಂಸತ್ ಅಧಿವೇಶನದಲ್ಲಿ, ರಾಹುಲ್ ನಾಯಕತ್ವದಲ್ಲಿ, ರೋಷಾವೇಶದಿಂದ ನಳನಳಿಸ್ತಾ ಇದೆ, ಐಎನ್‌ಡಿಐಎ ಮೈತ್ರಿ ಕೂಟ. ಮಹಾಮೈತ್ರಿಯ ಬಳಿಕ ನಡೀತಿರೋ ಮೊದಲ ಅಧಿವೇಶನ(Session) ಇದಾಗಿದೆ. ಈ ಅಧಿವೇಶನದಲ್ಲಿ ತಮ್ಮ ಬಲ ಪ್ರದರ್ಶಿಸೋದಷ್ಟೇ ಅಲ್ಲ, ತಮ್ಮ ಪ್ರಬಲ ಎದುರಾಳಿ, ನರೇಂದ್ರ ಮೋದಿ ಅವರನ್ನ ಹೇಗಾದ್ರೂ ಮಣಿಸಲೇಬೇಕು-ಮೋದಿ ಅವರ ಅಶ್ವಮೇಧ ಯಾಗದ ಕುದುರೆನಾ ಕಟ್ಟಿಹಾಕಲೇಬೇಕು ಅಂತ ನಿರ್ಣಯಿಸಿದ್ದಾರೆ. ಹಾಗಾಗಿನೇ, ಅಧಿವೇಶವನ್ನೇ ಯುದ್ಧ ಅನ್ನೋ ಹಾಗೆ ಟ್ರೀಟ್ ಮಾಡ್ತಾ ಇದಾರೆ ಅನ್ಸುತ್ತೆ.

ಇದನ್ನೂ ವೀಕ್ಷಿಸಿ:  ಚಲುವರಾಯಸ್ವಾಮಿ ವಿರುದ್ಧ ಲಂಚದ ಆರೋಪ: ಬಿಜೆಪಿಯಿಂದ PayCS ಪೋಸ್ಟರ್‌ ಅಭಿಯಾನ