ಚಲುವರಾಯಸ್ವಾಮಿ ವಿರುದ್ಧ ಲಂಚದ ಆರೋಪ: ಬಿಜೆಪಿಯಿಂದ PayCS ಪೋಸ್ಟರ್‌ ಅಭಿಯಾನ

ಮಂಡ್ಯದಲ್ಲಿ ಬಿಜೆಪಿಯಿಂದ PayCS ಪೋಸ್ಟರ್‌ ಅಭಿಯಾನವನ್ನು ಮಾಡಲಾಗುತ್ತಿದೆ. 
 

Share this Video
  • FB
  • Linkdin
  • Whatsapp

ಮಂಡ್ಯ: ಕೃಷಿ ಸಚಿವ ಚಲುವರಾಯಸ್ವಾಮಿ(Minister Chaluvarayaswamy) ವಿರುದ್ಧ ಲಂಚದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಸಚಿವರ ವಿರುದ್ಧ PayCS ಪೋಸ್ಟರ್‌ ಅಭಿಯಾನವನ್ನು(Campaign) ಮಾಡಲಾಗುತ್ತಿದೆ. ಮಂಡ್ಯದಲ್ಲಿ PayCS ಪೋಸ್ಟರ್‌ನನ್ನು ಬಿಜೆಪಿ(BJP) ಅಂಟಿಸುತ್ತಿದೆ. ನಗರದ ಹಲವೆಡೆ ಈ ಪೋಸ್ಟರ್‌ಗಳನ್ನು ಅಂಟಿಸಲಾಗುತ್ತಿದೆ. ಆದ್ರೆ ಪೊಲೀಸರು ಪೋಸ್ಟರ್‌ಗಳನ್ನು ಕಿತ್ತು ಹಾಕಿದ್ದಾರೆ. ಕೃಷಿ ಸಚಿವರ ವಿರುದ್ಧ ಲಂಚದ ಆರೋಪ ಮಾಡಿ ಅಧಿಕಾರಿಗಳು ಪತ್ರವನ್ನು ಬರೆದಿದ್ದರು ಎನ್ನಲಾಗ್ತಿದೆ. ಈ ಹಿಂದೆ ಕಾಂಗ್ರೆಸ್‌ ಪೇಸಿಎಂ ಅಭಿಯಾನವನ್ನು ಮಾಡಿತ್ತು.ಈ ಮೂಲಕ ಸರ್ಕಾರಕ್ಕೆ ಮುಜುಗರ ತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. 

ಇದನ್ನೂ ವೀಕ್ಷಿಸಿ: ಮಂಡ್ಯದ ಅನ್ನದಾತನ ಬದುಕು ಮೂರಾಬಟ್ಟೆ: ಯುವ ರೈತನನ್ನು ಕಳೆದುಕೊಂಡು ಬೀದಿಗೆ ಬಿದ್ದ ಹೆತ್ತವರು !

Related Video