Asianet Suvarna News Asianet Suvarna News

ಗೌಡರ ಮೊಮ್ಮಗನಿಗೆ ಪಟ್ಟ ಕಟ್ಟಲು ಪಕ್ಷದಿಂದ ಗ್ರೀನ್ ಸಿಗ್ನಲ್..? ರಾಷ್ಟ್ರ ರಾಜಕಾರಣಕ್ಕೆ ಅಪ್ಪ..ರಾಜ್ಯ ರಾಜಕಾರಣಕ್ಕೆ ಮಗ..!

ತಾತ, ತಂದೆಯ ಉತ್ತರಾಧಿಕಾರಿಯಾಗ್ತಾರಾ ಕುಮಾರಣ್ಣನ ವಾರಸ್ದಾರ..?
ಜೆಡಿಎಸ್ ರಾಜ್ಯಾಧ್ಯಕ್ಷ ರೇಸ್‌ನಲ್ಲಿ ನಿಖಿಲ್.. ನಡೆಯುತ್ತಾ ಪಟ್ಟಾಭಿಷೇಕ..?
36 ವರ್ಷದ ನಿಖಿಲ್ ಹೆಗಲಿಗೆ ಬೀಳಲಿದ್ಯಾ ಜೆಡಿಎಸ್ ರಾಜ್ಯಾಧ್ಯಕ್ಷ ಜವಾಬ್ದಾರಿ!

ಅದು ದೇವೇಗೌಡರು ಛಲದಿಂದ ಕಟ್ಟಿರೋ ಪಕ್ಷ. ಆ ಪಕ್ಷಕ್ಕೆ ಗೌಡರೇ ರಾಷ್ಟ್ರೀಯ ಅಧ್ಯಕ್ಷ, ಗೌಡರ ಮಗ ಕುಮಾರಸ್ವಾಮಿಯವ್ರೇ (Kumaraswamy)ರಾಜ್ಯಾಧ್ಯಕ್ಷ. ಈಗ ಜೆಡಿಎಸ್(JDS) ಸಾರಥ್ಯ ಗೌಡರ ಮೂರನೇ ತಲೆಮಾರಿನ ಕೈ ಸೇರುವ ಸಾಧ್ಯತೆಗಳು ಕಂಡು ಬರ್ತಾ ಇವೆ. ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ. ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿಯೋ ಹೆಸರಿದು. ದೇವೇಗೌಡರನ್ನು(Devegowda) ಬಿಟ್ಟು ರಾಜ್ಯ ರಾಜಕಾರಣದ ಇತಿಹಾಸವನ್ನು ಬರೆಯಲು ಸಾಧ್ಯವೇ ಇಲ್ಲ. ಗೌಡ್ರು ಅಂದ್ರೆ ಛಲದಂಕಮಲ್ಲ, ಗೌಡ್ರು ಅಂದ್ರೆ ಛಲದ ಪ್ರತೀಕ. ರಾಜಕೀಯ ಅಂತ ಬಂದ್ರೆ 92ನೇ ವಯಸ್ಸಲ್ಲೂ ಪಂಚೆ ಎತ್ತಿ ಕಟ್ಟಿ ಅಖಾಡಕ್ಕಿಳಿಯೋಕೆ ಗೌಡ್ರು ಸದಾ ರೆಡಿ. ಇಂಥಾ ದೇವೇಗೌಡರ ಛಲದ ಪ್ರತೀಕವೇ ಜಾತ್ಯಾತೀತ ಜನತಾದಳ ಪಕ್ಷ. ಜಾತ್ಯಾತೀತ ಜನತಾದಳ, ಅರ್ಥಾತ್ ಜೆಡಿಎಸ್.. ಪೆಟ್ಟು ಬಿದ್ದಷ್ಟೂ ಗಟ್ಟಿಯಾಗೋದು ಜೆಡಿಎಸ್ ಜಾಯಮಾನ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಮಾನವಾಗಿ ಸೋತಿದ್ದ ದಳಪತಿಗಳು, ಈಗ ಫೀನಿಕ್ಸ್'ನಂತೆ ಎದ್ದು ಕೂತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ(BJP) ಜೊತೆಗೂಡಿ ಸಾಧಿಸಿದ ಗೆಲುವು, ದಳಪತಿಗಳಿಗೆ ಹೊಸ ಹುರುಪು ತಂದು ಕೊಟ್ಟಿದೆ. ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗಿದ್ದೇ ತಡ, ಜೆಡಿಎಸ್‌ಗೆ ಆನೆಬಲ ಬಂದು ಬಿಟ್ಟಿದೆ. ಇದೇ ಹುರುಪಿನಲ್ಲಿ ಪಕ್ಷವನ್ನ ಬೇರ ಮಟ್ಟದಿಂದ ಕಟ್ಟಲು ರೆಡಿಯಾಗಿರೋ ದಳಪತಿಗಳು ಅದಕ್ಕೆ ಬ್ಲೂಪ್ರಿಂಟ್ ರೆಡಿ ಮಾಡಿದ್ದು, ಸೈನಿಕ ಪಡೆ ಸಿದ್ಧವಾಗಿ ನಿಂತಿದೆ. 

ಇದನ್ನೂ ವೀಕ್ಷಿಸಿ:  ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆಗೆ 1 ತಿಂಗಳು: ಇನ್ನೂ ಪತ್ತೆಯಾಗದ 2 ಪ್ರಮುಖ ಮೊಬೈಲ್ ಫೋನ್!

Video Top Stories