ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆಗೆ 1 ತಿಂಗಳು: ಇನ್ನೂ ಪತ್ತೆಯಾಗದ 2 ಪ್ರಮುಖ ಮೊಬೈಲ್ ಫೋನ್!

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೆನ್‌ಡ್ರೈವ್ ಸಾಕ್ಷ್ಯ ರೆಡಿ
ಆರೋಪಿಗಳ ಐಡೆಂಟಿಫಿಕೇಶನ್ ಪರೇಡ್ ನಡೆಸಿದ ಖಾಕಿ
ಡಿ ಗ್ಯಾಂಗ್ ಅಂದರ್ ಆದ್ರೂ ಆಪ್ತರಿಗೆ ತಪ್ಪದ ಸಂಕಷ್ಟ

First Published Jul 9, 2024, 4:37 PM IST | Last Updated Jul 9, 2024, 4:38 PM IST

ಇವತ್ತಿಗೆ ಸರಿಯಾಗಿ ಒಂದು ತಿಂಗಳು, ರೇಣುಕಾಸ್ವಾಮಿ ಅನ್ನೋ ಯುವಕ ಕೊಲೆಯಾಗಿ (Renukaswamy murder case ).ಆದ್ರೆ ಈ ಒಂದು ತಿಂಗಳಲ್ಲಿ ಏನೆಲ್ಲಾ ನಡೆದುಬಿಟ್ಟಿದೆ. ದರ್ಶನ್ ನಂತಹ ದರ್ಶನ್‌ನನ್ನೇ ಈ ಕೇಸ್ನಲ್ಲಿ ಜೈಲು ಸೇರುವಂತಾಯ್ತು. ದರ್ಶನ್ (Darshan) ಜೊತೆ ಇನ್ನೂ 16 ಮಂದಿ ಇವತ್ತು ಕಂಬಿ ಹಿಂದೆ ಸರೆದಿದ್ದಾರೆ. ಆದ್ರೆ ತನಿಖೆ ಶುರುವಾಗಿ ಒಂದು ತಿಂಗಳಾದ್ರೂ ಇನ್ನೂ ಪೊಲೀಸರು(Police) ಚಾರ್ಜ್‌ಶೀಟ್ ಸಲ್ಲಿಸಿಲ್ಲ. ಇವತ್ತಿಗೂ ದಿನಗೊಬ್ಬರಿಗಂತೆ ನೋಟಿಸ್ ನೀಡಲಾಗ್ತಿದೆ. ಸದ್ಯ ದರ್ಶನ್ ಗ್ಯಾಂಗ್ ಜಾಮೀನು ಸಿಗೋವರೆಗೂ ಪರಪ್ಪನ ಅಗ್ರಹಾರದಲ್ಲೇ ಇರಬೇಕಾಗುತ್ತೆ. ಆದ್ರೆ ಜಾಮೀನು ಸಿಗಬೇಕಾದ್ರೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಬೇಕು. ದರ್ಶನ್ ಈ ಕೇಸ್‌ನಲ್ಲಿ ತಗ್ಲಾಕಿಕೊಳ್ತಿದ್ದಂತೆ ಅವರನ್ನ ಬಚಾವ್ ಮಾಡಲು ಹಲವು ಕಾಣದ ಕೈಗಳು ಇನ್ನಿಲ್ಲದಂತೆ ಕಸರತ್ತು ನಡೆಸಿದ್ವು. ಕೆಲ ರಾಜಕಾರಣಿಗಳಂತೂ ಡೈರೆಕ್ಟ್ ಸಿಎಂ ಬಳಿಯೇ ಸಹಾಯ ಕೇಳಿದ್ರು. ಆದ್ರೆ ಪೊಲೀಸರು ಅದೆಲ್ಲವನ್ನೂ ಮೀರಿ ಈ ಕೇಸ್ ಅನ್ನ ಪ್ರಾಮಾಣಿಕವಾಗಿ ತನಿಖೆ ಮಾಡ್ತಿದ್ದಾರೆ. ಸದ್ಯ ಪೊಲೀಸರು ಸಾಕ್ಷ್ಯಗಳನ್ನ ಕಲೆಹಾಕುವಲ್ಲಿ ನಿರತರಾಗಿದ್ದು. ಈಗಾಗಲೇ 200 ಸಾಕ್ಷಿಗಳನ್ನ ಶೇಖರಿಸಿದ್ದಾರೆ.. ಆದ್ರೆ 2 ಮೊಬೈಲ್ಗಳು ಪತ್ತೆಯಾಗದಿರುವುದು ಪೊಲೀಸರಿಗೆ ತಲೆಬಿಸಿಯಾಗಿದೆ.

ಇದನ್ನೂ ವೀಕ್ಷಿಸಿ:  Bus Accident: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್: ಭೀಕರ ಅಪಘಾತದ ದೃಶ್ಯ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆ!