ನಾನೂ ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿ ಪರ ನಿಲ್ತೀನಿ : ಬಿಹಾರದಲ್ಲಿ ಮೋದಿ ಹೇಳಿಕೆ
I.N.D.I.A ಮೈತ್ರಿಕೂಟ ಮುಜ್ರಾ ಮಾಡಬೇಕಿದ್ದರೂ ಮಾಡಲಿ
ಲೋಕ ಕದನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ ಮೋದಿ ಹೇಳಿಕೆ
ಮೋದಿ ನರನಾಡಿಯಲ್ಲಿ ಮೀಸಲು ವಿರೋಧಿತನ ಎಂದು ಆರೋಪ
ಲೋಕಾ ಅಖಾಡದಲ್ಲಿ (Lok Sabha elections 2024)ಮೋದಿ ಮುಜ್ರಾ ಹೇಳಿಕೆ ಕಿಚ್ಚೆಬ್ಬಿಸಿದೆ. ಬಿಹಾರದ(Bihar) ಪಾಟಲಿಪುತ್ರ ಸಮಾವೇಶದಲ್ಲಿ ಮೋದಿ(Narendra Modi) ಭಾಷಣ ಮಾಡಿದ್ದು, I.N.D.I.A ಮೈತ್ರಿ ಮತಬ್ಯಾಂಕ್‌ಗಾಗಿ ಗುಲಾಮಿತನ ಮಾಡಲಿ ಎಂದಿದ್ದಾರೆ. I.N.D.I.A ಮೈತ್ರಿಕೂಟ ಮುಜ್ರಾ ಮಾಡಬೇಕಿದ್ದರೂ ಮಾಡಲಿ, ನಾನೂ ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿ ಪರ ನಿಲ್ತೀನಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅವರ ಈ ಹೇಳಿಕೆ ಲೋಕ ಕದನಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಮುಜ್ರಾ ಎಂದರೆ ಒಂದು ನೃತ್ಯದ ಹೆಸರಾಗಿದೆ. ಮೊಘಲ್ ಆಡಳಿತದಲ್ಲಿ ರಾಜರೆದುರು ಮಹಿಳೆಯರು ಪ್ರದರ್ಶಿಸುತ್ತಿದ್ದ ನೃತ್ಯ ಇದಾಗಿದೆ. ಮೋದಿ ಮುಜ್ರಾ ಹೇಳಿಕೆಗೆ ಇಂಡಿಯಾ ಮೈತ್ರಿ ಕೊತಕೊತ ಕುದಿಯುತ್ತಿದೆ. ಮೋದಿ ನರನಾಡಿಯಲ್ಲಿ ಮೀಸಲು ವಿರೋಧಿತನ ಎಂದು ಆರೋಪ ಮಾಡಿದೆ. ಸೋಲಿನ ಭಯದಿಂದಾಗಿ ಮೋದಿಜೀ ಸುಳ್ಳು ಭಾಷಣ ಮಾಡಿದ್ದು, ಮೋದಿಗೆ ಸೋಲಿನ ಸುಳಿವು ಸಿಕ್ಕಿದೆ ಎಂದು I.N.D.I.A ಮೈತ್ರಿಕೂಡ ಹೇಳುತ್ತಿದೆ.
ಇದನ್ನೂ ವೀಕ್ಷಿಸಿ: ಮಹರ್ಷಿ ವಾಲ್ಮೀಕಿ ನಿಗಮದಲ್ಲಿ 80-85 ಕೋಟಿ ಲೂಟಿ ಆರೋಪ: ಅವ್ಯವಹಾರಕ್ಕೆ ಬೆದರಿ ಅಧಿಕಾರಿ ಆತ್ಮಹತ್ಯೆ!