Watch Video: ಹೇಗಿರಲಿದೆ ಮೋದಿ ರಾಜ್ಯ ಪ್ರವಾಸದ ಇಂಪ್ಯಾಕ್ಟ್..? ದಕ್ಷಿಣ ಭದ್ರಕೋಟೆಯ ಮೇಲೆ ಪ್ರಧಾನಿ ಕಣ್ಣು!

ಟಾರ್ಗೆಟ್ 28 ತಲುಪೋಕೆ ಕೇಸರಿಪಡೆಯ ನಿಗೂಢ ವ್ಯೂಹ!
ಲೋಕ ಸಂಗ್ರಾಮದಲ್ಲಿ ಗೇಮ್ ಚೇಂಜರ್ ಆಗ್ತಾರಾ ಮೋದಿ?
ಕೇಸರಿ ಸೇನೆಯ ನಾಗಾಲೋಟಕ್ಕೆ ಅಡ್ಡಿಯಾಗುತ್ತಾ ಕೈಪಡೆ?

First Published Apr 8, 2024, 5:40 PM IST | Last Updated Apr 8, 2024, 5:42 PM IST

ದಿನಗಳುರುಳಿದ ಹಾಗೆಲ್ಲಾ ಲೋಕಸಮರ ಸಮೀಪಿಸ್ತಾ ಇದೆ. ಆ ಲೋಕಸಂಗ್ರಾಮದಲ್ಲಿ ಗೆಲ್ಲೋಕೆ, ಕಾಂಗ್ರೆಸ್(Congress) ಬಿಜೆಪಿ ಮಾತ್ರವೇ ಅಲ್ಲ, ಸರ್ವಪಕ್ಷಗಳೂ ಶತ ಪ್ರಯತ್ನ ಮಾಡ್ತಾ ಇದಾವೆ. ಈಗಾಗ್ಲೇ, ಆಲ್ ಮೋಸ್ಟ್ ಎಲ್ಲಾ ಕ್ಷೇತ್ರಗಳ ರಣಕಲಿಗಳೂ ಆಯ್ಕೆಯಾಗಿದ್ದಾಗಿದೆ. ಇನ್ನೇನಿದ್ರೂ ಮತಸಂಗ್ರಾಮ ನಡೆದು, ಗೆದ್ದ ಅಭ್ಯರ್ಥಿ ಯಾರು ಅನ್ನೋದು ಡಿಸೈಡ್ ಆಗೋದಷ್ಟೇ ಬಾಕಿ ಇರೋದು. ಈ ಬಾರಿ ಲೋಕಸಭಾ ಚುನಾವಣೆ(Loksabha Election) ಹತ್ತಾರು ಕುತೂಹಲಕ್ಕೆ ಕಾರಣವಾಗಿದೆ. ಒಂದೆಡೆ, ಪ್ರಧಾನಿ ಮೋದಿ(Narendra Modi) ಬಿಜೆಪಿ(BJP) 370 ಕ್ಷೇತ್ರಗಳಲ್ಲಿ ಗೆಲ್ಲಬೇಕು, ಎನ್‌ಡಿಎ ಶತಾಯಗತಾಯ 400 ಸ್ಥಾನಗಳನ್ನ ತನ್ನದಾಗಿಸಿಕೊಳ್ಳಬೇಕು ಅಂತ ಕಂಕಣ ತೊಟ್ಟಿದ್ದಾರೆ. ಮೋದಿ ಅವರ ಟಾರ್ಗೆಟ್ 400 ಸೀಟುಗಳು. ಅಂದ್ರೆ ದೇಶದಲ್ಲಿರೋ 543 ಸ್ಥಾನಗಳ ಪೈಕಿ, ಬರೋಬ್ಬರಿ 400 ಸೀಟುಗಳನ್ನ ಗೆಲ್ಲೋದು ಅಂದ್ರೆ, ಅದು ಹೇಳಿದಷ್ಟು ಸುಲಭದ ಮಾತಲ್ಲ. ಒಂದ್ ವೇಳೆ, ಮೋದಿ ಸೇನೆ 400ರ ಗಡಿ ಸಮೀಪಿಸಿದರೆ, ಅದೊಂದು ರೆಕಾರ್ಡ್ ಆಗೋದ್ರಲ್ಲಿ ಸಂದೇಹವಂತೂ ಇಲ್ಲ. ಮೋದಿ ಅವರು ತಾವೇ ಮತ್ತೆ ಅಧಿಕಾರದ ಗದ್ದುಗೆ ಹಿಡಿಯೋದು ಅನ್ನೋ ವಿಶ್ವಾಸದಲ್ಲಿದ್ದಾರೆ. ಅಷ್ಟೇ ಅಲ್ಲ, ಈ ಬಾರಿ ಶತಾಯಗತಾಯ 370 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು ಅನ್ನೋ ನಿರ್ಣಯವನ್ನೂ ಮಾಡ್ಕೊಂಡಿದಾರೆ. ಆದ್ರೆ ಅದು ಅಂದುಕೊಂಡಷ್ಟು ಸುಲಭವಲ್ಲ. ಆ ಕಠಿಣ ಕಾರ್ಯವನ್ನೂ ಸುಲಭಸಾಧ್ಯ ಮಾಡಿಕೊಳ್ಳೋಕೆ ಮೋದಿ ಪಡೆ ಚಿತ್ರ ವಿಚಿತ್ರ ವ್ಯೂಹ ಹೆಣೆದು ಅಖಾಡಕ್ಕೆ ಧುಮುಕ್ತಾ ಇದೆ.

ಇದನ್ನೂ ವೀಕ್ಷಿಸಿ:  ದಿಂಗಾಲೇಶ್ವರ ಶ್ರೀ ಏನೇ ಮಾತಾಡಿದ್ರು ಅದು ನನಗೆ ಆಶೀರ್ವಾದ: ಪ್ರಲ್ಹಾದ್ ಜೋಶಿ

Video Top Stories