ದಿಂಗಾಲೇಶ್ವರ ಶ್ರೀ ಏನೇ ಮಾತಾಡಿದ್ರು ಅದು ನನಗೆ ಆಶೀರ್ವಾದ: ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಸರ್ಕಾರದ ಬಳಿ ಕೊಡಲು ಹಣವೇ ಇಲ್ಲ. ಟ್ಯಾಕ್ಸ್ ದರ ಹೆಚ್ಚಿಗೆ ಮಾಡಿದ್ರು ಕಲೆಕ್ಷನ್ ಆಗುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿ: ದಿಂಗಾಲೇಶ್ವರ ಸ್ವಾಮೀಜಿ( Dingaleshwar Swamiji) ಏನೇ ಹೇಳಲಿ ನೋ ಕಾಮೆಂಟ್. ಅವರು ಏನೇ ಮಾತಾಡಿದ್ರು ಆಶೀರ್ವಾದ. ನಾನು ಯಾವ ರಿಯಾಕ್ಷನ್ ಕೊಡಲ್ಲ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Pralhad Joshi) ಹೇಳಿದ್ದಾರೆ. ಕಾಂಗ್ರೆಸ್(Congress) ಸರ್ಕಾರ ಪಾಪರ್ ಆಗಿದೆ. ಬರಗಾಲ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆ ವಿಚಾರವಾಗಿ ಮಾತನಾಡಿ, ಅರ್ಜಿ ವಿಚಾರಣೆ ಆಗಲಿ, ಆದರೆ ಇವರ ಬಳಿ ಕೊಡೋಕೆ ಹಣವೇ ಇಲ್ಲ. ಅರ್ಧಬಂರ್ಧ ಗ್ಯಾರಂಟಿ ಘೋಷಣೆ ಮಾಡಲಾಗಿದೆ. ಅದು ಸರಿಯಾಗಿ ಜನರಿಗೆ ತಲುಪಿಲ್ಲ. ಈ ಹಿಂದೆ ಯಡಿಯೂರಪ್ಪ ಸರ್ಕಾರ ಇದ್ದಾಗ ಹಣ ಕೊಟ್ಟಿತ್ತು. ರಾಜ್ಯ ಸರ್ಕಾರ ಯಾಕೆ ದುಡ್ಡು ಕೊಡುತ್ತಿಲ್ಲ. ಕೇವಲ 2000 ಕೊಡ್ತೀರಿ, ನಿಮಗೆ ನಾಚಿಕೆ ಆಗಲ್ವಾ? ಸರ್ಕಾರದಲ್ಲಿ ಭ್ರಷ್ಟಾಚಾರ ಜಾಸ್ತಿಯಾಗಿದೆ. ಟ್ಯಾಕ್ಸ್ ದರ ಹೆಚ್ಚಿಗೆ ಮಾಡಿದ್ರು ಕಲೆಕ್ಷನ್ ಆಗುತ್ತಿಲ್ಲ. ಮುದ್ರಾಂಕ ಶುಲ್ಕ ಸೇರಿ ಎಲ್ಲ ಕಡೆ ಟಾರ್ಗೆಟ್ ಕೊಟ್ಟಿದ್ದಾರೆ. ಅದು ಫೇಲ್ ಆಗಿದೆ.ವಿಪರೀತ ಸಾಲ ಮಾಡಿದ್ದಾರೆ. ಈಗ ಎಲ್ಲದಕ್ಕೂ ಮೋದಿ ಕಡೆ ಬೊಟ್ಟು ತೋರಿಸ್ತಿದ್ದಾರೆ ಎಂದು ಜೋಶಿ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: Shah Rukh Khan: ಈ ಸಿನಿಮಾ ಶೂಟಿಂಗ್ ವೇಳೆ ಕುಡಿದು ಬರ್ತಿದ್ರಂತೆ ಬಾಲಿವುಡ್ ಬಾದ್ ಶಾ! ಯಾಕೆ ಗೊತ್ತಾ?