Narendra Modi : ಖರ್ಗೆ ತವರಿನಿಂದಲೇ ಮೋದಿ ಶಂಖನಾದ: 1ಕಿಮೀ ರೋಡ್‌ ಶೋ..ಅದ್ಧೂರಿ ಕಾರ್ಯಕರ್ತರ ಸಮಾವೇಶ

ರಾಜ್ಯದಿಂದಲೇ ಪ್ರಧಾನಿ ಮೋದಿ ಚುನಾವಣಾ ಪ್ರಚಾರ
ಪೊಲೀಸ್ ಪರೇಡ್ ಮೈದಾನದಿಂದ ಮೋದಿ ರೋಡ್ ಶೋ
2 ಲಕ್ಷ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳುವ ಸಾಧ್ಯತೆ
 

Share this Video
  • FB
  • Linkdin
  • Whatsapp

ಕಲಬುರಗಿಯಿಂದಲೇ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ತವರಿಂದಲೇ ಮೋದಿ ಪ್ರಚಾರ(Campaign) ಆರಂಭಿಸಲಿದ್ದಾರೆ. ಸುಡು ಬಿಸಿಲಲ್ಲೂ ಒಂದೂವರೆ ಕಿ.ಮೀ ರೋಡ್‌ ಶೋ ನಡೆಸಲಿದ್ದಾರೆ. ಇಂದು ಕಲಬುರಗಿ(Kalaburagi) ಸಂಪೂರ್ಣ ಕೇಸರಿಮಯವಾಗಲಿದ್ದು, ಮೋದಿ ರ‍್ಯಾಲಿಯಲ್ಲಿ(Ralley) ಒಂದೂವರೆ ಲಕ್ಷ ಜನ ಭಾಗಿಯಾಗುವ ಸಾಧ್ಯತೆ ಇದೆ. ಕಲಬುರಗಿ, ಬೀದರ್‌, ಯಾದಗಿರಿ ಜಿಲ್ಲೆಗಳ ಮುಖಂಡರು ಭಾಗಿಯಾಗಲಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಲಬುರಗಿಯಿಂದಲೇ ಮೋದಿ ಶಂಖನಾದ ಮೊಳಗಿಸಲಿದ್ದು, 2019ರಲ್ಲೂ ಮೋದಿ ಇಲ್ಲಿಂದಲೇ ಪ್ರಚಾರ ಆರಂಭಿಸಿದ್ದರು. 

ಇದನ್ನೂ ವೀಕ್ಷಿಸಿ: Today Horoscope: ಇಂದು ಅಮೃತಸಿದ್ಧಿಯೋಗವಿದ್ದು, ಶುಭ ಕಾರ್ಯಗಳಿಗೆ ಉತ್ತಮ ದಿನ

Related Video