ಕೇಸರಿ ಕಲಿಗಳ ಪರ ರಾಜ್ಯದಲ್ಲಿ ಧೂಳೆಬ್ಬಿಸಲಿದೆ 'ನಮೋ' ಸುನಾಮಿ: 8 ಜಿಲ್ಲೆಗಳಲ್ಲಿ ಮೋದಿ ಮೆಗಾ ಕ್ಯಾಂಪೇನ್‌

ನಾಳೆ ಪ್ರಚಾರದ ಅಖಾಡಕ್ಕೆ ಪ್ರಧಾನಿ ಮೋದಿ ಎಂಟ್ರಿ
2 ದಿನ ರಾಜ್ಯದಲ್ಲಿ ಕೇಸರಿ ಅಲೆ ಎಬ್ಬಿಸಲಿರುವ ಮೋದಿ
ನಾಳೆ ಮೂರು ಸಮಾವೇಶಗಳಲ್ಲಿ ಪ್ರಧಾನಿ ಮೋದಿ ಭಾಗಿ

Share this Video
  • FB
  • Linkdin
  • Whatsapp

ಬೆಂಗಳೂರು: ನಾಳೆ ರಾಜ್ಯಕ್ಕೆ ಪ್ರಧಾನಿ ಮೋದಿ ಬರಲಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಎರಡು ದಿನ ಎಂಟು ಜಿಲ್ಲೆಗಳಲ್ಲಿ ಮೋದಿ ಕ್ಯಾಂಪೇನ್‌ ಮಾಡಲಿದ್ದಾರೆ. ಪ್ರತಿದಿನ ಮೂರು ಸಮಾವೇಶ, ಒಂದು ರೋಡ್‌ ಶೋ ಮಾಡುವ ಮೂಲಕ ಮೋದಿ ಪ್ರಚಾರ ಮಾಡಲಿದ್ದಾರೆ. ನಾಳೆ ಮೋದಿ ಮೂರು ಸಮಾವೇಶಗಳಲ್ಲಿ ಭಾಗಿಯಾಗಲಿದ್ದು, ಸಂಜೆ ರೋಡ್‌ ಶೋ ಮೂಲಕ ಮತಬೇಟೆ ನಡೆಸಲಿದ್ದಾರೆ. ಬೀದರ್‌ ಜಿಲ್ಲೆಯ ಹುಮ್ನಾಬಾದ್‌, ಕಿತ್ತೂರು ಕರ್ನಾಟಕದ ವಿಜಯಪುರ ಜಿಲ್ಲೆಯ ವಿಜಯಪುರ ಕ್ಷೇತ್ರ, ಬೆಳಗಾವಿಯ ಕುಡುಚಿ ಕ್ಷೇತ್ರ, ರಾಜರಾಜೇಶ್ವರಿ ನಗರ ಕ್ಷೇತ್ರ, ಕೋಲಾರ, ಮೈಸೂರಿನ ಚನ್ನಪಟ್ಟಣ ಕ್ಷೇತ್ರ, ಹಾಸನದಲ್ಲಿ ಮೋದಿ ಪ್ರಚಾರ ಮಾಡಲಿದ್ದಾರೆ.

ಇದನ್ನೂ ವೀಕ್ಷಿಸಿ: ಕರುನಾಡಲ್ಲಿ ಬಿಜೆಪಿ 'ಚಾಣಕ್ಯ' ಪವರ್‌ ಶೋ: ಕೇಸರಿ ಅಲೆ ಎಬ್ಬಿಸಲು ಅಬ್ಬರದ ಪ್ರಚಾರ

Related Video