ಕರುನಾಡಲ್ಲಿ ಬಿಜೆಪಿ 'ಚಾಣಕ್ಯ' ಪವರ್‌ ಶೋ: ಕೇಸರಿ ಅಲೆ ಎಬ್ಬಿಸಲು ಅಬ್ಬರದ ಪ್ರಚಾರ

ದಾವಣಗೆರೆಯಲ್ಲಿ ಇಂದು ಅಮಿತ್ ಶಾ ರಣೋತ್ಸಾಹ
ಕೇಸರಿ ಅಲೆ ಎಬ್ಬಿಸಲು ಬಿಜೆಪಿ ಚಾಣಕ್ಯನಿಂದ ಪ್ರಚಾರ
ಹರಿಹರದಲ್ಲಿ ಬಿಜೆಪಿ ಗೆಲ್ಲಿಸಲು ಅಮಿತ್‌ ಶಾ ರಣತಂತ್ರ

Share this Video
  • FB
  • Linkdin
  • Whatsapp

ದಾವಣಗೆರೆ: ವಿಧಾನಸಭಾ ಚುನಾವಣೆಹಿನ್ನೆಲೆ ಇಂದು ರಾಜ್ಯದಲ್ಲಿ ಅಮಿತ್‌ ಶಾ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಮಧ್ಯಕರ್ನಾಟಕ ಭಾಗದಲ್ಲಿ ಕೇಸರಿ ಅಲೆ ಎಬ್ಬಿಸಲು ಅಮಿತ್‌ ಶಾ ಮುಂದಾಗಿದ್ದಾರೆ. ದಾವಣಗೆರೆಯಲ್ಲಿ ಇಂದು ಬಿಜೆಪಿ ಚಾಣಕ್ಯ ಭರ್ಜರಿ ರೋಡ್ ಶೋ ನಡೆಸಲಿದ್ದು, ಹರಿಹರದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಈ ಮೂಲಕ ಹರಿಹರದಲ್ಲಿ ಕಮಲ ಅರಳಿಸಲು ಶಾ ರಣತಂತ್ರ ಹೂಡಿದ್ದಾರೆ. ಮಧ್ಯ ಕರ್ನಾಟಕ ಭಾಗ ಈಗಾಗಲೇ ಬಿಜೆಪಿಯ ಭದ್ರಕೋಟೆಯಾಗಿದ್ದು, ಏಳು ಕ್ಷೇತ್ರಗಳಲ್ಲಿ ಎರಡರಲ್ಲಿ ಮಾತ್ರ ಕಾಂಗ್ರೆಸ್‌ ಇದೆ. ಅಲ್ಲದೇ ಹರಿಹರ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ಇದೆ.

ಇದನ್ನೂ ವೀಕ್ಷಿಸಿ: ಮೋದಿ ಪ್ರಚಾರಕ್ಕೆ ಮುಹೂರ್ತ ಫಿಕ್ಸ್, ಕುರುಕ್ಷೇತ್ರಕ್ಕೆ ಗ್ರ್ಯಾಂಡ್‌ ಎಂಟ್ರಿ!

Related Video