Narendra Modi:ಮತ್ತೆ ಕರ್ನಾಟಕದಿಂದಲೇ ಮೋದಿ ಚುನಾವಣಾ ಪ್ರಚಾರ: ಈ ಬಾರಿಯೂ ಕಲಬುರಗಿಯಿಂದಲೇ ಎಲೆಕ್ಷನ್ ಕಿಕ್‌ಸ್ಟಾರ್ಟ್!

ಮತ್ತೆ ಕರ್ನಾಟಕದಿಂದಲೇ ಪ್ರಧಾನಿ ಮೋದಿ ಚುನಾವಣಾ ಪ್ರಚಾರ
ಖರ್ಗೆ ತವರಿನಿಂದಲೇ ಲೋಕ ಕದನಕ್ಕೆ ಪ್ರಧಾನಿ ಮೋದಿ ಶಂಖನಾದ
ಬಿಜೆಪಿ ರಣಕಹಳೆ ಮೊಳಗಿಸಲಿರುವ ಪ್ರಧಾನಿ ನರೇಂದ್ರ ಮೋದಿ

Share this Video
  • FB
  • Linkdin
  • Whatsapp

ನಾಳೆ ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ. ಮತ್ತೆ ಕರ್ನಾಟಕದಿಂದಲೇ(Karnataka) ಪ್ರಧಾನಿ ಮೋದಿ(Narendra Modi) ಚುನಾವಣಾ ಪ್ರಚಾರ ಆರಂಭಿಸಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ತವರಿನಿಂದಲೇ ಲೋಕ ಕದನಕ್ಕೆ ಪ್ರಧಾನಿ ಮೋದಿ ಶಂಖನಾದ ಹೊರಡಿಸಲಿದ್ದಾರೆ. 2019ರಲ್ಲಿಯೂ ಖರ್ಗೆ ಕ್ಷೇತ್ರದಿಂದಲೇ ಪ್ರಧಾನಿ ಮೋದಿ ಪ್ರಚಾರ ಆರಂಭಿಸಿದ್ದರು. ಈ ಬಾರಿಯೂ ಕಲಬುರಗಿಯಿಂದಲೇ(Kalaburagi) ಎಲೆಕ್ಷನ್ ಕಿಕ್‌ಸ್ಟಾರ್ಟ್ ಮಾಡಲಿದ್ದು, ನಾಳೆ ಕಲಬುರಗಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಪೊಲೀಸ್ ಪರೇಡ್ ಮೈದಾನದಿಂದ ಎನ್‌ ವಿ ಕಾಲೇಜ್‌ವರೆಗೆ ರೋಡ್ ಶೋ ಮಾಡಲಿದ್ದಾರೆ. ಕಲಬುರಗಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆ ನಡೆಯಲಿದೆ. ತೆಲಂಗಾಣದಿಂದ ವಿಶೇಷ ವಿಮಾನದ ಮೂಲಕ ಕಲಬುರಗಿಗೆ ಬರಲಿದ್ದು, ಮಧ್ಯಾಹ್ನ 2 ಗಂಟೆಗೆ ಬೃಹತ್ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಯಲಿದೆ. N.V ಕಾಲೇಜ್ ಮೈದಾನದಲ್ಲಿ ಕೇಸರಿ ಶಕ್ತಿ ಪ್ರದರ್ಶನ ನಡೆಯಲಿದೆ.

ಇದನ್ನೂ ವೀಕ್ಷಿಸಿ:  Chakravarti Sulibele: ಚುನಾವಣೆ ಸ್ಪರ್ಧೆಗೆ ಅವಕಾಶ ಸಿಕ್ಕರೆ ವಿರೋಧ ಇಲ್ಲ: ಚಿಂತಕ ಚಕ್ರವರ್ತಿ ಸೂಲಿಬೆಲೆ

Related Video