ಚುನಾವಣೆಯಲ್ಲಿ ಸೋಲಿಸುತ್ತೇವೆ: ತೆಲಂಗಾಣ -ರಾಯಚೂರು ಸಿಟಿ ಶಾಸಕರ ಸವಾಲ್
ನಾರಾಯಣಪೇಟೆ (Narayana Pete) ಶಾಸಕ ಎಸ್.ಆರ್.ರೆಡ್ಡಿ (SR Reddy) ಮತ್ತು ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ (Shivaraj Patil) ನಡುವೆ ವಾಕ್ ಸಮರ ನಡೆದಿದೆ. ಚುನಾವಣೆಯಲ್ಲಿ ಸೋಲಿಸುವುದಾಗಿ ಒಬ್ಬರಿಗೆ ಒಬ್ಬರು ಬಹಿರಂಗ ಸವಾಲ್ ಹಾಕಿದ್ದಾರೆ.
ರಾಯಚೂರು (ಮೇ.13): ನಾರಾಯಣಪೇಟೆ (Narayana Pete) ಶಾಸಕ ಎಸ್.ಆರ್.ರೆಡ್ಡಿ (SR Reddy) ಮತ್ತು ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ (Shivaraj Patil) ನಡುವೆ ವಾಕ್ ಸಮರ ನಡೆದಿದೆ. ಚುನಾವಣೆಯಲ್ಲಿ ಸೋಲಿಸುವುದಾಗಿ ಒಬ್ಬರಿಗೆ ಒಬ್ಬರು ಬಹಿರಂಗ ಸವಾಲ್ ಹಾಕಿದ್ದಾರೆ.
ರಮ್ಯಾ ಏನ್ ಟ್ವೀಟ್ ಮಾಡಿದ್ದಾರೋ, ಏನ್ ಮಿಸ್ ಫೈಯರ್ ಆಗಿದ್ಯೋ ಗೊತ್ತಿಲ್ಲ:ಡಿಕೆಶಿ
ನಿಮ್ಮ ಕ್ಷೇತ್ರದ ಮನೆ - ಮನೆಗೆ ತಿರುಗಿ ಎಸ್.ಆರ್. ರೆಡ್ಡಿಗೆ ಸೋಲಿಸುವೆ ಎಂದ ಶಾಸಕ ಶಿವರಾಜ್ ಪಾಟೀಲ್ ಹೇಳಿಕೆಗೆ ನಾರಾಯಣಪೇಟೆ ಶಾಸಕ ಎಸ್.ಆರ್. ರೆಡ್ಡಿ ತಿರುಗೇಟು ನೀಡಿದ್ದಾರೆ. 'ನನ್ನ ಕ್ಷೇತ್ರದಲ್ಲಿ ಬಂದು ನನ್ನ ಬಗ್ಗೆ ಮಾತನಾಡುವುದನ್ನು ಶಾಸಕ ಶಿವರಾಜ್ ಪಾಟೀಲ್ ನಿಲ್ಲಿಸಬೇಕು. ನಿಲ್ಲಿಸದಿದ್ದರೆ ನಾನೊಬ್ಬ ರಾಜಕಾರಣಿ, ಸನ್ಯಾಸಿಯಲ್ಲ. ನಾನು ಹೇಳಲ್ಲ ಮಾಡಿ ತೋರಿಸುವೆ' ಎಂದಿದ್ದಾರೆ.
ಎಸ್ .ಆರ್. ರೆಡ್ಡಿ ಹೇಳಿಕೆಗೆ ಡಾ.ಶಿವರಾಜ್ ಪಾಟೀಲ್ ತಿರುಗೇಟು ನೀಡಿದ್ದು, ಡಾ.ಶಿವರಾಜ್ ಪಾಟೀಲ್ ಸುಳ್ಳು ಹೇಳಲ್ಲ. ಮಾಡಿದ್ದನ್ನೇ ಹೇಳುತ್ತಾರೆ. ರೆಡ್ಡಿಯವರು ನವೋದಯ ಕಾಲೇಜಿನ ಅನುಮತಿ ಹೇಗೆ ತಂದಿದ್ದಾನೆ..? ಮೊದಲು ಕಾಲೇಜಿನಲ್ಲಿ ದುಡಿಯುವ ಕಾರ್ಮಿಕರಿಗೆ ಆನ್ ಲೈನ್ ಸಂಬಳ ನೀಡಲು ಮುಂದಾಗಲಿ, ಇಲ್ಲದಿದ್ರೆ ರಾಯಚೂರಿನಲ್ಲಿ ಅವರ ಮೆರವಣಿಗೆ ಮಾಡುವೆ ಎಂದು ಸವಾಲ್ ಹಾಕಿದ್ದಾರೆ.