ತುಮಕೂರಿನಿಂದ ಸ್ಪರ್ಧೆ ಮಾಡ್ತಾರಾ ಮುದ್ದಹನುಮೇಗೌಡ ? ಕಾಂಗ್ರೆಸ್‌ಗೆ ಜಂಪ್ ಮಾಡುವುದು ಬಹುತೇಕ ಪಕ್ಕಾ ?

ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚೆ 
ಕಾಂಗ್ರೆಸ್ಗೆ ಜಂಪ್ ಮಾಡುವುದು ಬಹುತೇಕ ಪಕ್ಕಾ
ಜಯಪ್ರಕಾಶ್ ಹೆಗ್ಡೆ ಕೂಡ ಕಾಂಗ್ರೆಸ್‌ನತ್ತ ಮುಖ

First Published Jan 30, 2024, 2:17 PM IST | Last Updated Jan 30, 2024, 2:18 PM IST

ಲೋಕಸಭೆ ಚುನಾವನೆ ಹೊಸ್ತಿಲಲ್ಲಿ ಆಪರೇಷನ್‌ ಜೋರಾಗಿದೆ. ಬಿಜೆಪಿ(BJP) ಬುಟ್ಟಿಗೆ ಕೈ ಹಾಕ್ತಾರಾ ಕಾಂಗ್ರೆಸ್(Congress) ನಾಯಕರು ಎಂಬ ಪ್ರಶ್ನೆ ಕೇಳಿಬಂದಿದೆ. ಲೋಕ ಸಮರಕ್ಕೆ ಕೆಲವು ನಾಯಕರು ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರೆ. ಅಲ್ಲದೇ ಅವರು ತುಮಕೂರಿನಿಂದ ಸ್ಫರ್ಧೆ ಮಾಡುತ್ತಾರೆ ಎನ್ನಲಾಗ್ತಿದೆ. ಬಿಜೆಪಿಯಿಂದ ಕಾಂಗ್ರೆಸ್‌ನತ್ತ ಮುದ್ದಹನುಮೇಗೌಡ ಮುಖ ಮಾಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್‌ಗೆ ಜಂಪ್ ಮಾಡುವುದು ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಫೆಬ್ರವರಿ ಮೊದಲ ವಾರದಲ್ಲಿ ಮುದ್ದಹನುಮೇಗೌಡ(SP Muddahanumegowda) ಕಾಂಗ್ರೆಸ್‌ಗೆ ಸೇರುವ ಸಾಧ್ಯತೆ ಇದೆ. ಜಯಪ್ರಕಾಶ್ ಹೆಗ್ಡೆ(Jayaprakash Hegde) ಕೂಡ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಹೆಗ್ಡೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಮಾರ್ಚ್‌ನಲ್ಲಿ ಕಾಂಗ್ರೆಸ್ ಸೇರ್ಪಡೆ ಬಹುತೇಕ ಪಕ್ಕಾ ಆಗಿದೆ.

ಇದನ್ನೂ ವೀಕ್ಷಿಸಿ: Bhagwanth Khuba: ವಿಜಯೇಂದ್ರ ಕಾಲಿಗೆ ಬಿದ್ದ ಚವ್ಹಾಣ್: ಬೀದರ್‌ ಬಿಜೆಪಿಯಲ್ಲಿ ತೀವ್ರಗೊಂಡ ಆಂತರಿಕ ಕಚ್ಚಾಟ