ನಾಳೆ ಬಾದಾಮಿಯಲ್ಲಿ ಬಿಜೆಪಿ ಸಮಾವೇಶ: ಬನಶಂಕರಿ ದೇಗುಲ ಭೇಟಿಗೆ ಪಿಎಂಗೆ ಮನವಿ

ಬನಶಂಕರಿ ದೇವಸ್ಥಾನಕ್ಕೆ ಮೋದಿ ಆಗಮಿಸಬೇಕು ಎಂಬ ಕುರಿತು ಮನವಿ ಪತ್ರವನ್ನೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳುಹಿಸಿಕೊಡಲಾಗಿದೆ. 

Share this Video
  • FB
  • Linkdin
  • Whatsapp

ಬಾಗಲಕೋಟೆ: ನಾಡಿನ ಶಕ್ತಿ ಪೀಠ ಐತಿಹಾಸಿಕ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿಗೆ, ಆಡಳಿತ ಮಂಡಳಿ ಪತ್ರ ಬರೆದಿದೆ. ಚುನಾವಣಾ ಪ್ರಚಾರಕ್ಕಾಗಿ ಮೇ.6 ರಂದು ಬಾದಾಮಿಗೆ ಪ್ರಧಾನಿ ಮೋದಿ ಬರಲಿದ್ದಾರೆ. ಈ ವೇಳೆ ಮೋದಿಗೆ ಕೊಡಲೆಂದು 2 ಕೆ ಜಿ ಬೆಳ್ಳಿಯ ಬನಶಂಕರಿ ಮೂರ್ತಿ ಸಿದ್ಧಪಡಿಸಲಾಗಿದೆ. ಬಾದಾಮಿಯಲ್ಲಿ ಬಿಜೆಪಿಯ ಬೃಹತ್‌ ಸಮಾವೇಶ ಇದ್ದು, ಸಮೀಪದಲ್ಲೇ ಶಕ್ತಿ ಪೀಠವಿದೆ. ದೇಶದ ಶಕ್ತಿ ಪೀಠಗಳಲ್ಲಿ ಇದು ಕೂಡ ಒಂದಾಗಿದ್ದು, ನಿಮ್ಮ ಪಕ್ಷ ಅಧಿಕಾರಕ್ಕೆ ಬರಲು ದೇವಿಯ ಅನುಗ್ರಹ ಪಡೆಯಬೇಕೆಂದು ಆಡಳಿತ ಮಂಡಳಿ ಮನವಿ ಮಾಡಿದೆ. 

ಇದನ್ನೂ ವೀಕ್ಷಿಸಿ: ಮೋದಿ ರೋಡ್‌ ಶೋ ಕಾರ್ಯಕ್ರಮದಲ್ಲಿ ಬದಲಾವಣೆ: ಯಾಕೆ ಗೊತ್ತಾ ?

Related Video