ಮೋದಿ ರೋಡ್‌ ಶೋ ಕಾರ್ಯಕ್ರಮದಲ್ಲಿ ಬದಲಾವಣೆ: ಯಾಕೆ ಗೊತ್ತಾ ?

ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪ್ರಧಾನಿ ಮೋದಿ ರೋಡ್‌ ಶೋ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಭಾನುವಾರ ನಿಗದಿಯಾಗಿದ್ದ ರೋಡ್‌ ಶೋ ಶನಿವಾರಕ್ಕೆ, ಶನಿವಾರ ನಡೆಯಬೇಕಿದ್ದ ರೋಡ್‌ ಶೋ ಭಾನುವಾರ ನಡೆಯಲಿದೆ.

Share this Video
  • FB
  • Linkdin
  • Whatsapp

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಕಾರ್ಯಕ್ರಮದಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ. ಇದೀಗ ಶನಿವಾರ ಮತ್ತು ಭಾನುವಾರ ಎರಡು ದಿನ ರೋಡ್ ಶೋ ನಡೆಸಲು ನಿರ್ಧರಿಸಲಾಗಿದೆ. ಶನಿವಾರ ಮತ್ತು ಭಾನುವಾರದ ರೋಡ್ ಶೋ ಕಾರ್ಯಕ್ರಮವನ್ನು ಅದಲು ಬದಲು ಮಾಡಲಾಗಿದೆ. ಶನಿವಾರ ಬೆ.10 ಗಂಟೆಯಿಂದ 12.30 ರವರೆಗೆ ರೋಡ್‌ ಶೋ ನಡೆಯಲಿದ್ದು, ಭಾನುವಾರ ಬೆಳಗ್ಗೆ 10 ಗಂಟೆಯಿಂದ 11.30ರವರೆಗೆ ನಡೆಯಲಿದೆ. ನೀಟ್‌ ಪರೀಕ್ಷೆ ಹಿನ್ನೆಲೆ ಪ್ರಧಾನಿ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಪಣತೊಟ್ಟಿದೆ. ಏಪ್ರಿಲ್ 29ರಿಂದ ಆರಂಭವಾಗಿರುವ ನರೇಂದ್ರ ಮೋದಿ ದಂಡಯಾತ್ರೆ ಮೇ. 7ರವರೆಗೂ ನಡೆಯಲಿದೆ.

ಇದನ್ನೂ ವೀಕ್ಷಿಸಿ: ಮೋದಿ ಪ್ರಧಾನಿಯಾದ ಬಳಿಕ ಕರ್ನಾಟಕಕ್ಕೆ ಎಷ್ಟು ಬಾರಿ ಬಂದಿದ್ದಾರೆ? ಇಲ್ಲಿದೆ ಅಸಲಿ ಲೆಕ್ಕ!

Related Video