Karnataka Election: ಬಿಜೆಪಿಯ ತ್ರಿಮೂರ್ತಿಗಳಿಂದ ಬದಲಾಗುತ್ತಾ ಮತ ಲೆಕ್ಕ ?

ರಾಜ್ಯದಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌  ಪ್ರಚಾರ ನಡೆಸಲಿದ್ದಾರೆ.
 

Share this Video
  • FB
  • Linkdin
  • Whatsapp

ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಅಬ್ಬರದ ಪ್ರಚಾರ ಮಾಡುತ್ತಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ರಾಜ್ಯದಲ್ಲಿ ಕ್ಯಾಂಪೇನ್‌ ಮಾಡಲಿದ್ದಾರೆ. ಏಪ್ರಿಲ್‌ 29ರಿಂದ ಪ್ರಧಾನಿ ಮೋದಿ ರಾಜ್ಯದಲ್ಲಿ ಮಿಂಚಿನ ಸಂಚಾರ ಮಾಡಲಿದ್ದಾರೆ. ಒಂದೇ ದಿನ ಎರಡು ಸಮಾವೇಶ, ಒಂದು ರೋಡ್ ಶೋ ಹಾಗೂ 10 ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಒಂದೊಂದು ರ್ಯಾಲಿ ಮಾಡಲಿದ್ದಾರೆ. ನಾಳೆಯಿಂದ ಯುಪಿ ಸಿಎಂ ಯೋಗಿ ಪ್ರಚಾರ ಆರಂಭವಾಗಲಿದೆ. ರಾಜ್ಯದಲ್ಲಿ ಹೆಚ್ಚು ಸ್ಥಾನವನ್ನು ಗೆಲ್ಲಲು ರಾಜ್ಯ ಬಿಜೆಪಿ ನಾಯಕರು ತ್ರಿಮೂರ್ತಿಗಳ ಮೊರೆ ಹೋಗಿದ್ದಾರೆ.

ಇದನ್ನೂ ವೀಕ್ಷಿಸಿ: ಕರುನಾಡ ಅಖಾಡದಲ್ಲಿ ದಿಗ್ಗಜರ ಮತಬೇಟೆ: ಯಾವ್ಯಾವ ನಾಯಕರು ಎಲ್ಲೆಲ್ಲಿ ಪ್ರಚಾರ ಮಾಡ್ತಾರೆ ?

Related Video