ಕರುನಾಡ ಅಖಾಡದಲ್ಲಿ ದಿಗ್ಗಜರ ಮತಬೇಟೆ: ಯಾವ್ಯಾವ ನಾಯಕರು ಎಲ್ಲೆಲ್ಲಿ ಪ್ರಚಾರ ಮಾಡ್ತಾರೆ ?

ರಾಜ್ಯದ ಎಂಟು ಕಡೆ ಮೂರು ಪಕ್ಷದ ಪ್ರಮುಖ ನಾಯಕರು ಪ್ರಚಾರವನ್ನು ನಡೆಸುತ್ತಿದ್ದಾರೆ. ಈ ಮೂಲಕ ಎಲ್ಲಾ ಪಕ್ಷಗಳು ಚುನಾವಣೆ ಗೆಲ್ಲಲು ರಣತಂತ್ರವನ್ನು ಹೂಡಿದಂತಿದೆ.

Share this Video
  • FB
  • Linkdin
  • Whatsapp

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಯಾವ ಯಾವ ನಾಯಕರು ಎಲ್ಲೆಲ್ಲಿ ಪ್ರಚಾರ ಮಾಡ್ತಾರೆ ಎಂಬ ಮಾಹಿತಿ ಇಲ್ಲಿದೆ. ವಿಜಯಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬೆಳಗಾವಿಯಲ್ಲಿ ಸಿಎಂ ಬೊಮ್ಮಾಯಿ, ದಕ್ಷಿಣ ಕನ್ನಡದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಚಾಮರಾಜದಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ, ಟಿ.ನರಸೀಪುರದಲ್ಲಿ ಪ್ರೀಯಾಂಕ ಗಾಂಧಿ, ವರುಣದಲ್ಲಿ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ, ದಾವಣಗೆರೆಯಲ್ಲಿ ವಿಜಯೇಂದ್ರ, ಬೆಳಗಾವಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಚಾರ ಮಾಡುತ್ತಿದ್ದಾರೆ. ಎಂಟು ದಿಕ್ಕುಗಳಲ್ಲಿ ನಾಯಕರು ಮತಬೇಟೆಯನ್ನು ಮಾಡುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: ಕರುನಾಡ ಕುರುಕ್ಷೇತ್ರದಲ್ಲಿ 'ಕೇಸರಿ' ಅಸಲಿ ಆಟ ಶುರು: 3 ದಿನ, 98 ನಾಯಕರು, 224 ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ

Related Video