
ಸಿಎಂ ಪುತ್ರನಿಗೆ ಎಂಎಲ್‌ಸಿ ಟಿಕೆಟ್ ಫಿಕ್ಸ್! ನಮ್ಮ ತಂದೆ ಬಳಿ ಹೇಳಿ ಅನುದಾನ ಕೊಡಿಸ್ತೀನಿ ಎಂದ ಯತೀಂದ್ರ!
ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಎಂಎಲ್‌ಸಿ ಟಿಕೆಟ್ ಪಕ್ಕಾ ಎನ್ನಲಾಗಿದೆ. ಯಾಕೆಂದರೆ, ನಾನು ಎಂಎಲ್‌ಸಿ ಆಗ್ತೀನಿ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿ, ನಾನು ಎಂಎಲ್‌ಸಿ (MLC)ಯಾಗಿ ಅನುದಾನ ಹಾಕೊಡ್ತೀನಿ ಎಂದು ಪ್ರಚಾರದ ಸಂದರ್ಭದಲ್ಲಿ ತಿಳಿಸಿದ್ದಾರೆ.
ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ (Yatindra Siddaramaiah) ಎಂಎಲ್‌ಸಿ ಟಿಕೆಟ್(MLC ticket) ಫಿಕ್ಸ್ ಆಗಿದೆ. ಈ ಮೊದಲೇ ನಾನು ಎಂಎಲ್‌ಸಿ ಆಗ್ತೀನಿ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿ, ನಾನು ಎಂಎಲ್‌ಸಿ (MLC) ಯಾಗಿ ಅನುದಾನ ಹಾಕೊಡ್ತೀನಿ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಎಂಎಲ್‌ಸಿ ಟಿಕೆಟ್ ಫಿಕ್ಸ್ ಆಗಿರೋದನ್ನ ಒಪ್ಪಿಕೊಂಡಿದ್ದಾರೆ. ನಮ್ಮ ತಂದೆ ಬಳಿ ಹೇಳಿ ಅವರಿಂದಲೂ ಅನುದಾನ ಕೊಡಿಸ್ತೀನಿ ಎಂದು ಟಿ.ನರಸೀಪುರದಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.
‘ಕೈ’ ಅಭ್ಯರ್ಥಿ ಮರಿತಿಬ್ಬೇಗೌಡ ಪರ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಯತೀಂದ್ರ ಅವರು ಈ ಹೇಳಿಕೆ ನೀಡಿದ್ದರು. ಶಾಲೆಗೆ ಅನುದಾನ ಬಿಡುಗಡೆ ಮಾಡಿಕೊಡುವಂತೆ ಶಿಕ್ಷಕಿ ಮನವಿ ಮಾಡಿದ ನಂತರ ಈ ಹೇಳಿಕೆ ನೀಡಿದ್ದರು. ಈ ಮೂಲಕ ಮತ್ತೊಮ್ಮೆ ಸಿಎಂ ಮಗನಿಗೆ ಟಿಕೆಟ್ ಫಿಕ್ಸ್ ಅನ್ನೋದು ದೃಢವಾಗಿದೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: ವಾಲ್ಮೀಕಿ ನಿಗಮ ಅಕ್ರಮ ಪ್ರಕರಣ: ಯಾವ್ಯಾವ ಕಂಪನಿಗೆ ಎಷ್ಟೆಷ್ಟು ಹಣ ವರ್ಗಾವಣೆ ಆಗಿದೆ ಗೊತ್ತಾ..?