ವಾಲ್ಮೀಕಿ ನಿಗಮ ಅಕ್ರಮ ಪ್ರಕರಣ: ಯಾವ್ಯಾವ ಕಂಪನಿಗೆ ಎಷ್ಟೆಷ್ಟು ಹಣ ವರ್ಗಾವಣೆ ಆಗಿದೆ ಗೊತ್ತಾ..?

ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಹಗರಣ ಇದೀಗ ಬಗೆದಷ್ಟು ಬಯಲಾಗ್ತಾ ಇದೆ. ಈ ನಡುವೆ ರಾಜ್ಯ ಸರ್ಕಾರಕ್ಕೆ ಸಚಿವ ನಾಗೇಂದ್ರ ಪ್ರಕರಣ ನುಂಗಲಾರದ ತುತ್ತಾಗಿದೆ.  

First Published Jun 1, 2024, 12:56 PM IST | Last Updated Jun 1, 2024, 12:57 PM IST

ವಾಲ್ಮೀಕಿ ನಿಗಮದಲ್ಲಿ (Valmiki Corporation) ಅಕ್ರಮ ಹಣ ವರ್ಗಾವಣೆ ಹಗರಣ ಇದೀಗ ಬಗೆದಷ್ಟು ಬಯಲಾಗ್ತಾ ಇದೆ. ಈ ನಡುವೆ ರಾಜ್ಯ ಸರ್ಕಾರಕ್ಕೆ(State Government) ಸಚಿವ ನಾಗೇಂದ್ರ (Minister Nagendra) ಪ್ರಕರಣ ನುಂಗಲಾರದ ತುತ್ತಾಗಿದೆ. ಇನ್ನು ಯಾವ್ಯಾವ ಕಂಪನಿಗೆ ಎಷ್ಟೆಷ್ಟು ಹಣ ವರ್ಗಾವಣೆ ಆಗಿದೆ ಅನ್ನೋ ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಿ ಇದೆ. ಐಟಿ ಕಂಪನಿ, ಸೆಕ್ಯೂರಿಟಿ ಏಜೆನ್ಸಿ, ಡಿಟೆಕ್ಟಿವ್ ಕಂಪನಿಗಳಿಗೂ ಹಣ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದ್ದು, ಒಟ್ಟು ಐದು ಬಾರಿ ಹಣ ವರ್ಗಾವಣೆ ನಡೆದಿರುವುದು ದಾಖಲೆ ಸಹಿತ ಬಹಿರಂಗವಾಗಿದೆ. ಒಟ್ಟು 79 ಕೋಟಿ 30 ಲಕ್ಷ 1 ಸಾವಿರದ 500 ರೂಪಾಯಿ ವರ್ಗಾವಣೆ ಮಾಡಿರುವುದು ಕಂಡುಬಂದಿದೆ.

ಇದನ್ನೂ ವೀಕ್ಷಿಸಿ:  ಕೇರಳದಲ್ಲಿ ಸಂಚಲನ ಸೃಷ್ಟಿಸಿದ ಡಿಕೆಶಿ ಸ್ಫೋಟಕ ಹೇಳಿಕೆ: ಪ್ರಾಣಿ ಬಲಿ ಕೊಟ್ಟು ಶತ್ರುಭೈರವಿ ಯಾಗದ ಬಗ್ಗೆ ತನಿಖೆ?