Asianet Suvarna News Asianet Suvarna News

ವಿದೇಶ ಪ್ರವಾಸಕ್ಕೆ ತೆರಳಲು ಸಜ್ಜಾದ್ರಾ ಶಾಸಕರು..? ಎಂಎಲ್‌ಎಗಳ ಮನವಿಗೆ ಸ್ಪೀಕರ್ ಖಾದರ್‌ ಪುರಸ್ಕಾರ ಸಿಗುತ್ತಾ..!?

ವಿದೇಶ ಪ್ರವಾಸಕ್ಕೆ ಅನುಮತಿ ಕೊಡ್ತಾರಾ ಯು.ಟಿ ಖಾದರ್?
ಕುತೂಹಲಕ್ಕೆ ಕಾರಣವಾದ ಸ್ಪೀಕರ್ ಯು.ಟಿ ಖಾದರ್ ನಡೆ
ಪಕ್ಷಾತೀತವಾಗಿ ವಿದೇಶ ಪ್ರವಾಸಕ್ಕೆ ತೆರಳಲು ಶಾಸಕರ ಸಿದ್ಧತೆ 

‘ಲೋಕ’ ಎಲೆಕ್ಷನ್ ಮುಗಿದ ಬೆನ್ನಲ್ಲೇ ವಿದೇಶ ಪ್ರವಾಸಕ್ಕೆ(Foreign tour) ತೆರಳಲು ಪಕ್ಷಾತೀತವಾಗಿ ಶಾಸಕರು ಸಿದ್ಧರಾಗುತ್ತಿದ್ದಾರಂತೆ. ಆರ್ಥಿಕ ಸಂಕಷ್ಟದ ಮಧ್ಯೆಯೇ ಶಾಸಕರ ಟೂರ್ ಪ್ಲ್ಯಾನ್‌ (MLAs tour plan‌ ) ಮಾಡಲಾಗಿದೆ. ವಿವಿಧ ಸ್ಥಾಯಿ ಸಮಿತಿಗಳ ಮೂಲಕ ವಿದೇಶ ಪ್ರವಾಸಕ್ಕೆ ಅಧಿವೇಶನಕ್ಕೂ ಮುನ್ನವೇ ಫಾರಿನ್ ಟ್ರಿಪ್‌ಗೆ ತಯಾರಿ ಮಾಡಲಾಗುತ್ತಿದೆ. ಆಡಳಿತ ವೆಚ್ಚ ಕಡಿತಕ್ಕೆ ರಾಜ್ಯ ಸರ್ಕಾರ(state government) ಲೆಕ್ಕಹಾಕಿದ್ದು, ರಾಜ್ಯದಲ್ಲಿ ಬರಗಾಲದಿಂದ ಸಂಕಷ್ಟದಲ್ಲಿರುವ ಅನ್ನದಾತರು. ದರ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆಯೇ ವಿದೇಶ ಪ್ರವಾಸಕ್ಕೆ ತೆರಳಲು ಶಾಸಕರು ಪ್ಲ್ಯಾನ್‌ ಮಾಡಿದ್ದಾರಂತೆ. ಆಡಳಿತ ವೆಚ್ಚ ಕಡಿತ, ರಾಜ್ಯ ಸಂಕಷ್ಟದ ಬೆನ್ನಲ್ಲೆ ವಿದೇಶ ಪ್ರವಾಸ, ತೀವ್ರ ಚರ್ಚೆಗೆ ಕಾರಣವಾದ ಶಾಸಕರ ವಿದೇಶ ಪ್ರವಾಸ ಪ್ರಸ್ತಾಪ. ವಿದೇಶ ಪ್ರವಾಸ ಕುರಿತು ಸ್ಪೀಕರ್ ಮೇಲೆ ಹೆಚ್ಚಿದ ಒತ್ತಡ, ಯು.ಟಿ ಖಾದರ್ (Ut khader) ಮೇಲೆ ಒತ್ತಡ ಹೇರಿರುವ ಶಾಸಕರ ತಂಡ. ವಿವಿಧ ಸ್ಥಾಯಿ‌ ಸಮಿತಿಗಳ ಅಧ್ಯಕ್ಷರು, ಶಾಸಕರಿಂದ ಮನವಿ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ಮೈಸೂರಲ್ಲಿ ಪಾರಿವಾಳಗಳಿಂದ ಅರಮನೆಗೆ ಕುತ್ತು: ಹಿಕ್ಕೆಯಲ್ಲಿನ ಆ್ಯಸಿಡ್‌ಯುಕ್ತ ಕಲ್ಮಶದಿಂದ ಅರಮನೆ ವಿರೂಪ!

Video Top Stories