Asianet Suvarna News Asianet Suvarna News

ಮೈಸೂರಲ್ಲಿ ಪಾರಿವಾಳಗಳಿಂದ ಅರಮನೆಗೆ ಕುತ್ತು: ಹಿಕ್ಕೆಯಲ್ಲಿನ ಆ್ಯಸಿಡ್‌ಯುಕ್ತ ಕಲ್ಮಶದಿಂದ ಅರಮನೆ ವಿರೂಪ!

ಮೈಸೂರು ಅರಮನೆ ಮುಂಭಾಗ ಪಾರಿವಾಳಗಳಿಗೆ ಆಹಾರವನ್ನು ಹಾಕಬೇಡಿ, ಇದರಿಂದ ಅರಮನೆ ವಿರೂಪವಾಗಲಿದೆ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ಮೈಸೂರು: ಪಾರಿವಾಳಗಳಿಂದ(Pigeons) ಹಿಕ್ಕೆಯಿಂದ ಮೈಸೂರು ಅರಮನೆ (Mysore Palace) ಹಾಗೂ ಪಾರಂಪರಿಕ ಕಟ್ಟಡಗಳಿಗೆ ಕಂಟಕ ಉಂಟಾಗುತ್ತಿದೆ ಎಂದು ಮೈಸೂರು ಜಿಲ್ಲಾಡಳಿತ ಹೇಳಿದೆ. ಈ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್ ವರದಿಗೆ ಸ್ಪಂದಿಸಿದ ಮೈಸೂರು ಜಿಲ್ಲಾಡಳಿತ, ಅರಮನೆ ಮುಂಭಾಗ ಪಾರಿವಾಳಗಳಿಗೆ ಆಹಾರ ಹಾಕುವುದನ್ನ ಕೂಡಲೇ ನಿಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದೆ. ಪಾರಿವಾಳಗಳಿಗೆ ಆಹಾರ ಅರಮನೆ ಮುಂಭಾಗ ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಧಾನ್ಯಗಳನ್ನ ಹಾಕಿ. ಈಗಾಗಲೇ ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದೆ. ನಾಳೆಯಿಂದಲೇ ಅರಮನೆ ಮುಂಭಾಗ ಒಬ್ಬರ ನೇಮಿಸಿ ಆಹಾರ ಹಾಕದಂತೆ ತಡೆಯುತ್ತೇವೆ. ಒಂದೇ ಕಡೆ ಹೆಚ್ಚು ಆಹಾರ ಧಾನ್ಯ ಹಾಕುವ ಬದಲು ಹಂತ ಹಂತವಾಗಿ ಪಾರಂಪರಿಕ ಕಟ್ಟಡಗಳಿಂದ ದೂರದಲ್ಲಿ ಪಕ್ಷಿಗಳಿಗೆ ಆಹಾರ ಧಾನ್ಯ ಹಾಕಿ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  'ಕಲ್ಕಿ 2898 AD' ರಿಲೀಸ್ ದಿನವೇ ‘ಟಾಕ್ಸಿಕ್’ನಿಂದ ಸಿಕ್ತು ಬಿಗ್ ನ್ಯೂಸ್! ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಮಾಡುತ್ತಿರೋ ಯಶ್ ಟೀಂ

Video Top Stories