MLA Balakrishna: ನಿಮ್ಮ ಮತ ಅಕ್ಷತೆಗಾ…? ಐದು ಗ್ಯಾರಂಟಿಗಾ..? ಕೈ ಶಾಸಕನ ಬಿಗ್ ಬಾಂಬ್..!

ಗ್ಯಾರಂಟಿ ಯೋಜನೆಗಳು ರದ್ದಾಗುವ ಸುಳಿವು ಕೊಟ್ಟರಾ ಕಾಂಗ್ರೆಸ್ ಶಾಸಕ..?    
ಕೈ ಶಾಸಕ ನುಡಿದ ಗ್ಯಾರಂಟಿ ಭವಿಷ್ಯ.. ಬಿಜೆಪಿಗೆ ಸಿಕ್ಕಿತು ಮತ್ತೊಂದು ಅಸ್ತ್ರ..!
"ಮತದಾರರನ್ನು ಕಾಂಗ್ರೆಸ್ ಬ್ಲ್ಯಾಕ್‌ಮೇಲ್ ಮಾಡ್ತಿದೆ" ಅಂದ್ರು ವಿಜಯೇಂದ್ರ..!

Share this Video
  • FB
  • Linkdin
  • Whatsapp

ಕರ್ನಾಟಕ ಕುರುಕ್ಷೇತ್ರದಲ್ಲಿ ಕಾಂಗ್ರೆಸ್'ಗೆ ಪ್ರಚಂಡ ಜಯ ತಂದು ಕೊಟ್ಟಿತ್ತು ಗ್ಯಾರಂಟಿ ಅಸ್ತ್ರ. ಲೋಕಸಮರದಲ್ಲೂ ಕೈ ಬತ್ತಳಿಕೆಯಿಂದ ನುಗ್ಗಿ ಬರಲಿದೆ ಮತ್ತದೇ ಆಯುಧ. ಗ್ಯಾರಂಟಿಗಳ(Guarantees) ಮೇಲೆ ಗ್ಯಾರಂಟಿಗಳನ್ನೇ ಘೋಷಿಸಿ, ಪಂಚ ಗ್ಯಾರಂಟಿಗಳ ಬಲದಿಂದಲೇ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ ಕಾಂಗ್ರೆಸ್(Congress) ಪಕ್ಷ. ಕಾಂಗ್ರೆಸ್'ನ ಗ್ಯಾರಂಟಿ ಸರ್ಕಾರಕ್ಕೆ ಸಿದ್ದರಾಮಯ್ಯ(Siddaramaiah) ಮುಖ್ಯಮಂತ್ರಿ, ಡಿಕೆ ಶಿವಕುಮಾರ್(DK Shivakumar) ಉಪಮುಖ್ಯಮಂತ್ರಿ. ಜೋಡೆತ್ತು ಸರ್ಕಾರ 8 ತಿಂಗಳು ಪೂರೈಸಿ 9ನೇ ತಿಂಗಳಿಗೆ ಕಾಲಿಟ್ಟಿದೆ. ಈಗಾಗ್ಲೇ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಗ್ಯಾರಂಟಿ ಸರ್ಕಾರ.ಈಗ ಲೋಕಸಭಾ(Loksabha) ಚುನಾವಣೆ ಹತ್ತಿರ ಬರ್ತಾ ಇದೆ. ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿರೋ ಸಿದ್ದು ಸರ್ಕಾರ, ಅದನ್ನೇ ಚುನಾವಣೆಯಲ್ಲಿ ಬ್ರಹ್ಮಾಸ್ತ್ರವಾಗಿ ಪ್ರಯೋಗಿಸಲು ಮುಂದಾಗಿದೆ. ಆದ್ರೆ ಈಗ ಎದ್ದಿರೋ ಪ್ರಶ್ನೆ ಏನಂದ್ರೆ, ಈ ಗ್ಯಾರಂಟಿಗಳು ಐದು ವರ್ಷವೂ ಇರುತ್ತಾ..? ಲೋಕಸಭಾ ಚುನಾವಣೆಯ ನಂತ್ರ ಗ್ಯಾರಂಟಿ ಭವಿಷ್ಯ ಏನು..? ಲೋಕಸಂಗ್ರಾಮದಲ್ಲಿ ಕಾಂಗ್ರೆಸ್'ಗೆ ರಾಜ್ಯದಲ್ಲಿ ನಿರೀಕ್ಷಿತ ಸ್ಥಾನಗಳು ಬರದೇ ಇದ್ದರೆ, ಗ್ಯಾರಂಟಿ ಯೋಜನೆಗಳು ಕ್ಯಾನ್ಸಲ್ ಆಗಲಿವೆಯಾ..? ಇಂಥದ್ದೊಂದು ಮಿಲಿಯನ್ ಡಾಲರ್ ಪ್ರಶ್ನೆ ಹುಟ್ಟಲು ಕಾರಣ, ಕಾಂಗ್ರೆಸ್ ಶಾಸಕ ಮಾಗಡಿ ಬಾಲಕೃಷ್ಣ ಕೊಟ್ಟಿರೋ ಅದೊಂದು ಸ್ಫೋಟಕ ಹೇಳಿಕೆ.

ಇದನ್ನೂ ವೀಕ್ಷಿಸಿ: Duniya Vijay in Varanasi: ವಾರಣಾಸಿಯಲ್ಲಿ ಚಿತೆಗಳ ಮಧ್ಯೆ ನಿಂತ ನಟ ದುನಿಯಾ ವಿಜಯ್!

Related Video