Asianet Suvarna News Asianet Suvarna News

ಒಂದೆಡೆ ಸಂಸದ ಮುನಿಸ್ವಾಮಿ ವೀರಾವೇಷದ ಭಾಷಣ, ಮತ್ತೊಂದೆಡೆ ಶ್ರೀರಾಮುಲು‌ ನಿದ್ರೆ....

ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮಾತ್ರ ವೇದಿಕೆಯಲ್ಲಿ ಆಯಾಗಿ ನಿದ್ದೆ ಮಾಡುತ್ತಿದ್ದಾರೆ. ಕೋಲಾರದ ಬಂಗಾರಪೇಟೆ ತಾಲೂಕಿನಲ್ಲಿ ಇಂದು (ಗುರುವಾರ) ನಡೆದ ಜನ ಸೇವಕ ಸಮಾವೇಶದಲ್ಲಿ ಭರ್ಜರಿ ನಿದ್ದೆ ಮಾಡಿದರು. ಈ ವಿಡಿಯೋ ಇದೀಗ ಫುಲ್ ವೈರಲ್ ಆಗುತ್ತಿದೆ.

Jan 13, 2021, 3:44 PM IST

ಕೋಲಾರ, (ಜ.13): ಅತ್ತ ಸಂಪುಟ ವಿಸ್ತರಣೆಯಾಗುತ್ತಿದ್ದು, ಏಳು ಜನರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಮತ್ತೊಂದೆಡೆ ಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಕೆಲ ಬಿಜೆಪಿ ಶಾಸಕ ಬಹಿರಂಗವಾಗಿಯೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.

ಇಬ್ಬರೂ ಜತೆಗಿರುವ ವಿಡಿಯೋ ನೋಡಿದ್ದೀರಾ, ಈಗ ಯಾರೆಂಬುದು ಗೊತ್ತಿಲ್ಲ ಅಂದ್ರೆ?: HDKಗೆ ಟಾಂಗ್

ಇದೆಲ್ಲರದರ ಮಧ್ಯೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮಾತ್ರ ವೇದಿಕೆಯಲ್ಲಿ ಆಯಾಗಿ ನಿದ್ದೆ ಮಾಡುತ್ತಿದ್ದಾರೆ. ಕೋಲಾರದ ಬಂಗಾರಪೇಟೆ ತಾಲೂಕಿನಲ್ಲಿ ಇಂದು (ಗುರುವಾರ) ನಡೆದ ಜನ ಸೇವಕ ಸಮಾವೇಶದಲ್ಲಿ ಭರ್ಜರಿ ನಿದ್ದೆ ಮಾಡಿದರು. ಈ ವಿಡಿಯೋ ಇದೀಗ ಫುಲ್ ವೈರಲ್ ಆಗುತ್ತಿದೆ.