ರಾಧಿಕಾ ಯಾರು ಗೊತ್ತಿಲ್ಲ. ಗೊತ್ತಿಲ್ಲದವರ ಬಗ್ಗೆ ಕೇಳಬೇಡಿ ಎಂದಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು. ಇದಕ್ಕೆ ಇದೀಗ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮಂಡ್ಯ, (ಜ.13): ರಾಧಿಕಾ, ಎಚ್‌ಡಿಕೆ ಜತೆಯಲ್ಲಿ ಓಡಾಡಿದ್ದು ನೋಡಿದ್ದೀರಾ. ಅವರಿಬ್ಬರು ಜತೆಯಲ್ಲಿ ಹೋಗಿರೋದನ್ನು ನೋಡಿದ್ದೀರಾ. ಈಗ ಅವರು ಯಾರೆಂಬುದು ಗೊತ್ತಿಲ್ಲ ಅಂದ್ರೆ ಏನು? ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ಕೆಲದಿನಗಳ ಹಿಂದೆ ಶ್ರೀರಂಗಪಟ್ಟಣದ ನೇರಳೆಕೆರೆ ಗ್ರಾಮಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ರಾಧಿಕಾಗೆ ಸಿಸಿಬಿ ನೋಟಿಸ್ ಬಂದಿರುವ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಯಾರಪ್ಪ ಅವರೆಲ್ಲ? ಅದ್ಯಾರೋ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು.
ರಾಧಿಕಾ ಬಗ್ಗೆ ಕೊನೆಗೂ ಮೌನ ಮುರಿದ ಕುಮಾರಸ್ವಾಮಿ...!
ಇನ್ನು ಕುಮಾರಸ್ವಾಮಿ ಅವರ ಆ ಹೇಳಿಕೆಗೆ ನಾಗಮಂಗಲದಲ್ಲಿ ಇಂದು (ಬುಧವಾರ) ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ ವ್ಯಂಗ್ಯವಾಡಿದ್ದಾರೆ.
ರಾಧಿಕಾ, ಹೆಚ್‌ಡಿಕೆ ಜತೆಯಲ್ಲಿ ಓಡಾಡಿದ್ದು ನೋಡಿದ್ದೀರಾ. ಅವರಿಬ್ಬರು ಜತೆಯಲ್ಲಿ ಹೋಗಿರೋದನ್ನು ನೋಡಿದ್ದೀರಾ. ಇಬ್ಬರೂ ಜತೆಗಿರುವ ವಿಡಿಯೋವನ್ನೂ ನೋಡಿದ್ದೀರಾ. ಈಗ ಅವರು ಯಾರೆಂಬುದು ಗೊತ್ತಿಲ್ಲ ಅಂದ್ರೆ ಏನು? ಅವರ ವೈಯಕ್ತಿಕ ಜೀವನದ ಬಗ್ಗೆ ನಾನು ಹೇಳಿಕೆ ಕೊಡಲ್ಲ ಎಂದು ಹೇಳಿದರು.
"
Read Exclusive COVID-19 Coronavirus News updates, from Karnataka, India and World at Asianet News Kannada.
Last Updated Jan 13, 2021, 3:46 PM IST