ಶ್ರೀರಾಮುಲು ನಾವು ಜೊತೆಗಿದ್ದೆವು ಅವರ ಸೋಲಿಗೆ ಅನುಕಂಪವಿದೆ: ಸಚಿವ ನಾಗೇಂದ್ರ

ಬಿಜೆಪಿ ದುರಾಡಳಿತವೇ ಈ ಸೋಲಿಗೆ ಕಾರಣ. ಆದ್ರೆ ಶ್ರೀರಾಮುಲು ಅವರ ಸೋಲಿಗೆ ಅನುಕಂಪವಿದೆ ಎಂದು ಸಚಿವ ನಾಗೇಂದ್ರ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬಳ್ಳಾರಿ ಗೆದ್ದು ಸೋನಿಯಾಗಾಂಧಿಗೆ (Sonia Gandhi) ಗಿಫ್ಟ್ ಕೊಡ್ತೇವೆ ಎಂದಿದ್ದೆವು, ಈಗ ಗಿಫ್ಟ್ ಕೊಟ್ಟಿದ್ದೇವೆ. ಬಿಜೆಪಿ ದುರಾಡಳಿತವೇ ಈ ಸೋಲಿಗೆ ಕಾರಣ ಎಂದು ಸಚಿವ ನಾಗೇಂದ್ರ (Minister Nagendra) ಹೇಳಿಕೆ ನೀಡಿದ್ದಾರೆ. ಅದಾಗ್ಯೂ ಶ್ರೀರಾಮುಲು (Sriramulu) ಸೋಲಿಗೆ ಅನುಕಂಪವಿದೆ ಎಂದು ಬಳ್ಳಾರಿ ಲೋಕಸಭೆ ಗೆಲುವಿನ ರೂವಾರಿ ನಾಗೇಂದ್ರ ಸುವರ್ಣ ನ್ಯೂಸ್ ಗೆ ಹೇಳಿಕೆ ನೀಡಿದ್ದಾರೆ. ಶ್ರೀರಾಮುಲು ನಾವು ಜೊತೆಗಿದ್ದೆವು, ಸ್ನೇಹಿತರು ಹಾಗೂ ಅಣ್ಣತಮ್ಮಂದಿರು. ಆದರೆ, ರಾಜಕೀಯ ವಿರೋಧಿಗಳು, ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸೇರಿದಂತೆ ಎಲ್ಲರು ಈ ಗೆಲುವಿಗೆ ಕಾರಣ ಎಂದು ಸಂತಸ ಹಂಚಿಕೊಂಡಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿ, ನನಗೆ ರಾಜೀನಾಮೆ ಕೊಡುವಂತೆ ಒತ್ತಡವೇ ಇಲ್ಲ. ನಾನು ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ, ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಲು ಈಗಾಗಲೇ ಎಸ್ ಐ ಟಿ ಗೆ ಕೊಡಲಾಗಿದೆ, ಎಸ್ ಐ ಟಿ ಗೆ ಕೊಡುವಂತೆ ಒತ್ತಾಯ ಮಾಡಿದ್ದು ಸಹ ನಾನೇ, ಭ್ರಷ್ಟಾಚಾರಿಗಳನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ: ಜಯಲಕ್ಷ್ಮಿ ರೈಸ್ ಮಿಲ್ ಓನರ್ ಮಗ ಇವತ್ತು ಹಾಸನದ ಎಂಪಿ ಆಗಿದ್ದಾನೆ: ಶ್ರೇಯಸ್ ಪಟೇಲ್ ತಾಯಿ

Related Video