ಜಯಲಕ್ಷ್ಮಿ ರೈಸ್ ಮಿಲ್ ಓನರ್ ಮಗ ಇವತ್ತು ಹಾಸನದ ಎಂಪಿ ಆಗಿದ್ದಾನೆ: ಶ್ರೇಯಸ್ ಪಟೇಲ್ ತಾಯಿ
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಭರ್ಜರಿ ಗೆಲುವು ಹಿನ್ನೆಲೆ ಮಗನ ಗೆಲುವಿಗೆ ತಾಯಿ ಆನಂದಭಾಷ್ಪ ಸುರಿಸಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದಲ್ಲಿ (Hassan Lok Sabha Constituency) ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ (Shreyas Patel) ಗೆಲುವು ಹಿನ್ನೆಲೆ ಮಗನ ಗೆಲುವಿಗೆ ತಾಯಿ ಆನಂದಭಾಷ್ಪ ಸುರಿಸಿದ್ದಾರೆ. ಮಗನ ಗೆಲುವಿಗೆ ಸಂತಸ ಹೊರಹಾಕಿದ ತಾಯಿ ಅನುಪಮಾ, ಸತತ ಸೋಲಿನಿಂದ ಕೆಂಗಟ್ಟಿದ್ದ ನಮಗೆ ಗೆಲುವು ಸಿಕ್ಕಿದ್ದು ಖುಷಿ ತಂದಿದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಗೆ (Siddaramaiah, D K Shivakumar) ಧನ್ಯವಾದ ಅರ್ಪಿಸುತ್ತೇನೆ, ಹಾಗೆಯೇ ಹಾಸನದ ಜನತೆಗೆ ಧನ್ಯವಾದ ಎಂದಿದ್ದಾರೆ.
ಹಾಸನದ ಜನತೆ ದರ್ಪದ ರಾಜಕಾರಣಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ಮೂರು ಬಾರಿ ಸೋತರು ನಮಗೆ ಪಕ್ಷ ಅವಕಾಶ ಮಾಡಿಕೊಟ್ಟಿದ್ದಕ್ಕೆ ನಾನು ಅವರಿಗೆ ಆಭಾರಿಯಾಗಿದ್ದೇನೆ, ಪದೇಪದೇ ಸೋಲನ್ನು ತಡೆಯುವ ಶಕ್ತಿ ನನ್ನಲ್ಲಿ ಇರಲಿಲ್ಲ, ಈ ಗೆಲುವು ನಮಗೆ ಅವಶ್ಯಕತೆ ಇತ್ತು. ಸತತ ಸೋಲುಂಡಾಗ ಕೆಲ ವಿರೋಧ ಪಕ್ಷದ ನಾಯಕರು ನನ್ನನ್ನು ಹೀಯಾಳಿಸಿದ್ದರು ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. 2008ರ ಚುನಾವಣೆಯಲ್ಲಿ ಆಫ್ಟ್ರಾಲ್ ಜಯಲಕ್ಷ್ಮಿ ರೈಸ್ ಮಿಲ್ ಓನರಲ್ಲ ಅಂತಾ ಹಾಸನದ ದೊಡ್ಡ ನಾಯಕರು ಹೇಳಿದ್ದರು.ಈಗ ನಾನು ಅವರಿಗೆ ಹೇಳುವುದಕ್ಕೆ ಇಷ್ಟಪಡುತ್ತೇನೆ, ಜಯ ಲಕ್ಷ್ಮಿ ರೈಸ್ ಮಿಲ್ ಓನರ್ ಮಗ ಇವತ್ತು ಹಾಸನದ ಎಂಪಿ ಆಗಿದ್ದಾನೆ ಅಂತಾ ಎಂದು ಟಾಂಗ್ ನಿಡಿದ್ದಾರೆ.
ಇದನ್ನೂ ವೀಕ್ಷಿಸಿ: ಏನೂ ಮಾಡದೇ ಆತ ಕೊಲೆಯಾಗಿದ್ದೇಕೆ..? ಮೀಟರ್ ಬಡ್ಡಿ ದಂಧೆಗೆ ಬಿತ್ತಾ ಪುಡಿ ರೌಡಿಯ ಹೆಣ ?