ಪುತ್ರನಿಗೆ ಬಿಎಸ್‌ವೈ ಕ್ಷೇತ್ರ ತ್ಯಾಗ: ಇದು ಬಿಜೆಪಿ ನಿರ್ಧಾರ ಅಲ್ಲ, ಅಚ್ಚರಿ ಹೇಳಿಕೆ ನೀಡಿದ ಸಚಿವ

ಯಡಿಯೂರಪ್ಪ ಅವರು ತಮ್ಮ ಪುತ್ರ ಬಿವೈ  ವಿಜಯೇಂದ್ರಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಇದು ಪುತ್ರ ವ್ಯಾಮೋಹ, ಕುಟುಂಬ ರಾಜಕಾರಣ ಅಂತೆಲ್ಲಾ ಬಿಂಬಿತವಾಗುತ್ತಿದೆ. ಬಿಎಸ್‌ ಕ್ಷೇತ್ರ ತ್ಯಾಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇನ್ನು ಪುತ್ರನಿಗೆ ಬಿಎಸ್‌ವೈ ಕ್ಷೇತ್ರತ್ಯಾಗ ಬಿಜೆಪಿ ನಿರ್ಧಾರ ಅಲ್ಲ, ಪಕ್ಷ ಹೇಳಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.

First Published Jul 22, 2022, 8:04 PM IST | Last Updated Jul 22, 2022, 8:04 PM IST

ಬೆಂಗಳೂರು, (ಜುಲೈ.22): ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಪುತ್ರ ಬಿವೈ  ವಿಜಯೇಂದ್ರ ಅವರಿಗೆ  ಶಿಕಾರಿಪುರ ವಿಧಾನಸಭ ಕ್ಷೇತ್ರವನ್ನು ಧಾರೆ ಎರೆದುಕೊಟ್ಟಿದ್ದಾರೆ. ಈ ಮೂಲಕ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ. ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 

ಪುತ್ರಿನಿಗೆ ಬಿಎಸ್‌ವೈ ಕ್ಷೇತ್ರ ತ್ಯಾಗ: ಯತೀಂದ್ರ ಸಿದ್ದರಾಮಯ್ಯ ಹಾದಿ ಸುಗಮ, ಕಾಂಗ್ರೆಸ್‌ಗೆ ಪ್ಲಸ್

ಅಲ್ಲದೇ ಪುತ್ರ ವ್ಯಾಮೋಹ, ಕುಟುಂಬ ರಾಜಕಾರಣ ಅಂತೆಲ್ಲಾ ಬಿಂಬಿತವಾಗುತ್ತಿದೆ. ಬಿಎಸ್‌ ಕ್ಷೇತ್ರ ತ್ಯಾಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇನ್ನು ಪುತ್ರನಿಗೆ ಬಿಎಸ್‌ವೈ ಕ್ಷೇತ್ರತ್ಯಾಗ ಬಿಜೆಪಿ ನಿರ್ಧಾರ ಅಲ್ಲ, ಪಕ್ಷ ಹೇಳಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.

Video Top Stories