Loksabha Eection: ಜೋರಾದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಭರಾಟೆ.. ಇಂದು ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ಉಮೇದುವಾರಿಕೆ!

ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ
ಹಾಸನದಲ್ಲಿ ‘ಕೈ’ ಅಭ್ಯರ್ಥಿ ಶ್ರೇಯಸ್ ಪಟೇಲ್ ಉಮೇದುವಾರಿಕೆ
ಬೆಂಗಳೂರು ಕೇಂದ್ರದ ಅಭ್ಯರ್ಥಿ ಪಿ.ಸಿ ಮೋಹನ್ ಉಮೇದುವಾರಿಕೆ

Share this Video
  • FB
  • Linkdin
  • Whatsapp

ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇಂದು ಸ್ಟಾರ್ ಚಂದ್ರು(Star Chandru) ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಅದ್ಧೂರಿ ಮೆರವಣಿಗೆಯಲ್ಲಿ ಆಗಮಿಸಿ ನಾಮಿನೇಷನ್(Nomination) ಮಾಡಲಿದ್ದಾರೆ. ಸ್ಟಾರ್ ಚಂದ್ರುಗೆ ಕಾಂಗ್ರೆಸ್ ನಾಯಕರು ಸಾಥ್ ನೀಡಲಿದ್ದಾರೆ. ಕಾಂಗ್ರೆಸ್(Congress) ರಾಜ್ಯ ಉಸ್ತುವಾರಿ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಚಲುವರಾಯಸ್ವಾಮಿ ಇರಲಿದ್ದಾರೆ. ಇನ್ನೂ ಹಾಸನದಲ್ಲಿ ‘ಕೈ’ ಅಭ್ಯರ್ಥಿ ಶ್ರೇಯಸ್ ಪಟೇಲ್ ಉಮೇದುವಾರಿಕೆ ಸಲ್ಲಿಸಲಿದ್ದು, ರೋಡ್ ಶೋ ಮೂಲಕ ಡಿಸಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಬೆಂಗಳೂರು ಕೇಂದ್ರದಲ್ಲಿ ಪಿ.ಸಿ ಮೋಹನ್‌ರಿಂದ ನಾಮಿನೇಷನ್, ಬೆಂಗಳೂರು ಕೇಂದ್ರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ ಮೋಹನ್ ಆಗಿದ್ದಾರೆ. ಪಿ.ಸಿ ಮೋಹನ್‌ಗೆ ಬಿಎಸ್‌ವೈ, ಸಿಟಿ ರವಿ, ಆರ್.ಅಶೋಕ್ ಸಾಥ್ ನೀಡಲಿದ್ದಾರೆ.

ಇದನ್ನೂ ವೀಕ್ಷಿಸಿ: INDIA Alliance: ಕೇಂದ್ರದ ವಿರುದ್ಧ ಇಂಡಿಯಾ ಮೈತ್ರಿಕೂಟ ರಣಕಹಳೆ: ಮೋದಿ ವಿರುದ್ಧ ‘ಲೋಕತಂತ್ರ ಬಚಾವೋ’ ಹೋರಾಟ!

Related Video