INDIA Alliance: ಕೇಂದ್ರದ ವಿರುದ್ಧ ಇಂಡಿಯಾ ಮೈತ್ರಿಕೂಟ ರಣಕಹಳೆ: ಮೋದಿ ವಿರುದ್ಧ ‘ಲೋಕತಂತ್ರ ಬಚಾವೋ’ ಹೋರಾಟ!

ಕೇಂದ್ರದ ವಿರುದ್ಧ ಇಂಡಿಯಾ ಮೈತ್ರಿಕೂಟ ರಣಕಹಳೆ
ಮೋದಿ ವಿರುದ್ಧ ‘ಲೋಕತಂತ್ರ ಬಚಾವೋ’ ಹೋರಾಟ
ದೆಹಲಿಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಮೈತ್ರಿ ನಾಯಕರು

Share this Video
  • FB
  • Linkdin
  • Whatsapp

ಈ ಬಾರಿ ಲೋಕಸಭಾ ಮಹಾಯುದ್ಧದಲ್ಲಿ ಪ್ರಧಾನಿ ಮೋದಿ ಗೆಲುವಿನ ಓಟಕ್ಕೆ ಶತಾಯಗತಾಯ ಬ್ರೇಕ್ ಹಾಕಬೇಕೆಂದು ವಿಪಕ್ಷಗಳು ಪಣ ತೊಟ್ಟಿವೆ. ‘ಇಂಡಿಯಾ’(INDIA) ಮೈತ್ರಿಕೂಟ ರಚಿಸಿ ಭರ್ಜರಿ ಪ್ರಚಾರ ಮಾಡ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(Delhi) ವಿಪಕ್ಷಗಳು ಬಲಪ್ರದರ್ಶನ ಮಾಡಿದ್ವು. ‘ಲೋಕತಂತ್ರ ಬಚಾವೋ’ ಸಮಾವೇಶ(Loktantra Bachao Rally) ಆಯೋಜಿಸಿ, ಕೇಂದ್ರ ಸರ್ಕಾರದ ವಿರುದ್ಧ ಕಹಳೆ ಮೊಳಗಿಸಿದವು. ಕೇಜ್ರಿವಾಲ್, ಹೇಮಂತ್ ಸೊರೇನ್ ಬಂಧನಕ್ಕೆ ಖಂಡನೆ ವ್ಯಕ್ತಪಡಿಸಲಾಯ್ತು. ಇತ್ತ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ(Campaign) ನಡೆಸಿದ ಪ್ರಧಾನಿ ಮೋದಿ(Narendra Modi) ವಿಪಕ್ಷಗಳ ಕೂಟಕ್ಕೆ ಕೌಂಟರ್ ನೀಡಿದ್ರು. ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಮಾವೇಶ ನಡೆಸಿ, ಕೇಜ್ರಿವಾಲ್, ಹೇಮಂತ್ ಸೊರೇನ್ ಬಂಧನಕ್ಕ ಖಂಡನೆ ವ್ಯಕ್ತಪಡಿಸಿದರು. ಕಾಂಗ್ರೆಸ್ ಬ್ಯಾಂಕ್ ಖಾತೆ ಸೀಜ್ ವಿರುದ್ಧವೂ ಪ್ರತಿಭಟನೆ ನಡೆಸಲಾಯಿತು.

ಇದನ್ನೂ ವೀಕ್ಷಿಸಿ: Amit Shah: ರಾಜ್ಯಕ್ಕೆ ಚುನಾವಣಾ ಚಾಣಕ್ಯ ‘ಅಮಿತ್ ಶಾ’ ಎಂಟ್ರಿ: ಡಿಕೆ ಬ್ರದರ್ಸ್ ತವರಿನಿಂದಲೇ ಎಲೆಕ್ಷನ್ ಕಹಳೆ !

Related Video