ಶ್ರೀ ರಾಮಮಂದಿರ ಪರವೋ..? ವಿರೋಧವೋ..? ಖರ್ಗೆ ಹೇಳಿದ್ದೇನು..? ಕಾಂಗ್ರೆಸ್‌ಗೆ ಬಿಸಿತುಪ್ಪವಾದ ಪ್ರಭು ಶ್ರೀರಾಮ..!
ಲೋಕ ಸಂಗ್ರಾಮದ ಕ್ಲೈಮೆಕ್ಸ್ಗೆ ಶ್ರೀರಾಮನ ದಾರಿಗೆ ಬಂತಾ ಕಾಂಗ್ರೆಸ್..?
ಮೈತ್ರಿ ಗೆದ್ದರೆ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣ ಎಂದ ಖರ್ಗೆ
ಕಾಂಗ್ರೆಸ್ ಗೆದ್ದರೆ ರಾಮನ ಮೂರ್ತಿ ಮತ್ತೆ ಟೆಂಟ್ ಸೇರುತ್ತೆ ಎಂದ ಮೋದಿ
ಒಂದು ಕಡೆ ಶ್ರೀರಾಮ ಭಕ್ತಿಯ ಮೇಲೆ, ಶ್ರೀರಾಮನ ದೈವಿ ಶಕ್ತಿಯ ಮೇಲೆ ಬಿಜೆಪಿ(BJP) ನಂಬಿಕೆ ಇಟ್ಟಿದೆ. ಆದ್ರೆ ಶ್ರೀರಾಮನಿಗೆ(Sri Ram Mandir) ದ್ರೋಹ ಮಾಡುವ ಜನರೂ ಇದ್ದಾರೆ. ಮೊದಲು ವಿರೋಧ ಪಕ್ಷದವರು ರಾಮಲಲ್ಲಾನನ್ನು ಟೆಂಟ್‍ಗೆ ಹಾಕಿದ್ರು. ನಂತರ ತಮ್ಮ ವೋಟ್‍ಬ್ಯಾಂಕ್ ಖುಷಿ ಪಡಿಸಲು ಮಂದಿರದ ಬದಲಿಗೆ ಧರ್ಮಶಾಲೆ ನಿರ್ಮಾಣ ಮಾಡಿ, ಶಾಲೆ ನಿರ್ಮಾಣ ಮಾಡಿ, ಆಸ್ಪತ್ರೆ ನಿರ್ಮಾಣ ಮಾಡಿ ಅಂದ್ರು. ಯಾವಾಗ ಮಂದಿರ ನಿರ್ಮಾಣವಾಯ್ತೋ ಹೊಟ್ಟೆಯೊಳಗೆ ವಿಷವಿಟ್ಟುಕೊಂಡಿದ್ರು. ಆದ್ರಿಂದ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರವನ್ನೇ ಧಿಕ್ಕರಿಸಿದ್ರು. ಇದಿಷ್ಟೆ ಅಲ್ಲದೇ, ಕಾಂಗ್ರೆಸ್(Congress) ಅಧಿಕಾರಕ್ಕೆ ಬಂದ ನಂತರ ರಾಮಮಂದಿರದ ಕುರಿತು ಸುಪ್ರೀಂಕೋರ್ಟ್‍ನ ಆದೇಶವನ್ನು ಪ್ರಶ್ನಿಸಲು ಯೋಜಿಸುತ್ತಿದೆ. ಅಂತಿಮವಾಗಿ ದೇವಾಲಯವನ್ನು ಕೆಡವಲಿದೆ ಎನ್ನಲಾಗ್ತಿದೆ. ಕಾಂಗ್ರೆಸ್ ಎಂದಿಗೂ ಮಾಡದ ಕೆಲಸಗಳ ಬಗ್ಗೆ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ. ನಾವು ಯಾರ ಮೇಲೂ ಬುಲ್ಡೋಜರ್ ಬಳಸಿಲ್ಲ. ಸುಳ್ಳು ಹೇಳುವುದು ಮತ್ತು ಜನರನ್ನು ಪ್ರಚೋದಿಸುವ ಅಭ್ಯಾಸವನ್ನು ಮೋದಿ(Narendra Modi) ಹೊಂದಿದ್ದಾರೆ. ಮೋದಿ ಭಾಷಣವು ವಿಭಜನೆ ಮತ್ತು ಪ್ರಚೋದಿಸುವ ಉದ್ದೇಶದಿಂದ ಕೂಡಿದೆ. ಇಂತಹ ಪ್ರಧಾನಿಯನ್ನು ನಾನೆಂದೂ ನೋಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಬಿಜೆಪಿ ಗೆಲ್ಲೋಕೆ..ಎದುರಾಳಿ ಸೋಲೋಕೆ..3 ಕಾರಣ?! ರಾಜಕೀಯ ಚಾಣಾಕ್ಷ ನುಡಿದ ಭವಿಷ್ಯವೇನು ..?