Amit Shah: ರಾಜ್ಯಕ್ಕೆ ಚುನಾವಣಾ ಚಾಣಕ್ಯ ‘ಅಮಿತ್ ಶಾ’ ಎಂಟ್ರಿ: ಡಿಕೆ ಬ್ರದರ್ಸ್ ತವರಿನಿಂದಲೇ ಎಲೆಕ್ಷನ್ ಕಹಳೆ !

ನಾಳೆ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಅಮಿತ್ ಶಾ
ಡಿಕೆ ಬ್ರದರ್ಸ್ ತವರಿನಿಂದಲೇ ಬಿಜೆಪಿ ಚಾಣಕ್ಯ ಎಲೆಕ್ಷನ್ ಕಹಳೆ
ರೋಡ್ ಶೋ.ಸರಣಿ ಸಭೆ.. ಸಮಾವೇಶ ನಡೆಸಲಿರುವ ಶಾ

First Published Apr 1, 2024, 11:29 AM IST | Last Updated Apr 1, 2024, 11:29 AM IST

ಕರ್ನಾಟಕದಲ್ಲಿ ಲೋಕಸಭಾ ಅಖಾಡ ರಂಗೇರಿದೆ. ಕದನಕಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಶಕ್ತಿ ತುಂಬಲು ಕರುನಾಡಿಗೆ ಅಮಿತ್ ಶಾ(Amit Shah) ಎಂಟ್ರಿ ನೀಡಲಿದ್ದಾರೆ. ಇಂದು ರಾತ್ರಿಯೇ ಬೆಂಗಳೂರಿಗೆ ಚುನಾವಣಾ ಚಾಣಕ್ಯ ಆಗಮಿಸಲಿದ್ದು, ನಾಳೆ ಡಿಕೆ ಬ್ರದರ್ಸ್ ಭದ್ರಕೋಟೆಯಿಂದಲೇ ರಣಕಹಳೆ ಮೊಳಗಿಸಲಿದ್ದಾರೆ. ಚನ್ನಪಟ್ಟಣದಲ್ಲಿ(Channapatna) ಬೃಹತ್ ಸಮಾವೇಶ ನಡೆಸಿ ಡಾ.ಸಿ.ಎನ್ ಮಂಜುನಾಥ್(CN Manjunath) ಪರ ಮತಬೇಟೆ ನಡೆಸಲಿದ್ದಾರೆ. ಹಾಗೆ ಬಿಜೆಪಿ ಮುಖಂಡರು, ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಬಿಜೆಪಿ(BJP) ಗೆಲುವಿಗೆ ರೂಟ್‌ಮ್ಯಾಪ್ ಸಿದ್ಧಪಡಿಸಲಿದ್ದಾರೆ. ಇಂದು ರಾತ್ರಿ 11 ಗಂಟೆಗೆ ಅಮಿತ್ ಶಾ ಬೆಂಗಳೂರಿಗೆ(Bengaluru) ಆಗಮಿಸಲಿದ್ದು, ಹೊಟೇಲ್ ತಾಜ್ ವೆಸ್ಟ್ ಆ್ಯಂಡ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ದಿನಪೂರ್ತಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ವೀಕ್ಷಿಸಿ:  LK Advani: ಆದರ್ಶ ಬದುಕಿಗೆ ಕನ್ನಡಿಯಾದ ‘ಭಾರತ ರತ್ನ’: ಅಡ್ವಾಣಿಯವರ ರಾಜಕೀಯ ಬದುಕು ತುಂಬಾ ರೋಚಕ !