ಸಾಹುಕಾರ್‌ ಕೋಟೆಗೆ ಸವದಿ ಲಗ್ಗೆ: ಜಾರಕಿಹೊಳಿ ತಂತ್ರಕ್ಕೆ ಪ್ರತಿತಂತ್ರ!

ರಮೇಶ್‌ ಜಾರಕಿಹೊಳಿ ವಿರುದ್ಧ ಪಂಚಮಸಾಲಿ ತಂತ್ರ
ಅಶೋಕ್‌ ಪೂಜಾರಿ ಮನವೊಲಿಸಿದ ಲಕ್ಷ್ಮಣ ಸವದಿ
ಮಹಾಂತೇಶ್‌ ಕಡಾಡಿಗೆ ಬೆಂಬಲಿಸಲು ಅಶೋಕ್ ಒಪ್ಪಿಗೆ

First Published Apr 21, 2023, 10:32 AM IST | Last Updated Apr 21, 2023, 10:32 AM IST

ಬೆಳಗಾವಿ: ಕುಂದಾನಗರಿಯಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ರಮೇಶ್‌ ಜಾರಕಿಹೊಳಿ ತಂತ್ರಕ್ಕೆ ಲಕ್ಷ್ಮಣ ಸವದಿ ಪ್ರತಿತಂತ್ರ ಹೂಡಿದ್ದಾರೆ. ಈ ಮೂಲಕ ಸಾಹುಕಾರ್‌ಗೆ ಟಕ್ಕರ್‌ ಕೊಡಲು ಸವದಿ ಮುಂದಾಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ ಸವದಿ ಪಂಚಮಸಾಲಿ ನಾಯಕರ ಜೊತೆ ಮಾತುಕರೆ ನಡೆಸಿ, ಅವರ ಮನವೊಲಿಸುವಲ್ಲಿ ಯಶಸ್ವಿಯಾದಂತೆ ಕಾಣುತ್ತಿದೆ. ಗೋಕಾಕ್‌ ಕಾಂಗ್ರೆಸ್‌ ಅಭ್ಯರ್ಥಿ ಮಹಾಂತೇಶ್‌ ಕಡಾಡಿ ಬೆಂಬಲಿಸುವುದಾಗಿ ಅಶೋಕ್‌ ಪೂಜಾರಿ ಘೋಷಿಸಿದ್ದಾರೆ. ಅಶೋಕ್‌ ಪೂಜಾರಿ ಗೋಕಾಕ್‌ ಕ್ಷೇತ್ರಕ್ಕೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು.ಆದ್ರೆ ಇವರಿಗೆ ಟಿಕೆಟ್ ಸಿಗದ ಹಿನ್ನೆಲೆ  ಮುನಿಸಿಕೊಂಡಿದ್ದರು.ಇದೀಗ ಲಕ್ಷ್ಮಣ ಸವದಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ವೀಕ್ಷಿಸಿ: ಅಥಣಿಯಲ್ಲಿ ಸವದಿ Vs ಕುಮಟಳ್ಳಿ: ಹೇಗಿದೆ ರಣಕಣ?

Video Top Stories