ಮೋದಿಯಾದರೂ ಬರಲಿ, ಅಮೆರಿಕ ಅಧ್ಯಕ್ಷನಾದರೂ ಬರಲಿ, ಭಾಷಣ ಮಾಡಿ ಹೋಗ್ತಾರೆ ಅಷ್ಟೇ : ಹೆಚ್‌ಡಿಕೆ ಲೇವಡಿ

ಪ್ರಧಾನಿ ಮೋದಿ ಚನ್ನಪಟ್ಟಣಕ್ಕೆ ಬಂದ್ರೆ ನನಗೆ  ಯಾವುದೇ ಭಯವಿಲ್ಲ. ಅವರು ಬರುವುದರಿಂದ ಜನರಿಗೆ ಯಾವುದೇ ಅನುಕೂಲವಾಗುವುದಿಲ್ಲ ಎಂದು ಹೆಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು: ಚನ್ನಪಟ್ಟಣದಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸಲಿದ್ದಾರೆ. ಇದಕ್ಕೆ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಮೋದಿಯಾದ್ರೂ ಬರಲಿ, ಅಮೆರಿಕ ಅಧ್ಯಕ್ಷರಾದ್ರೂ ಬರಲಿ, ಅವರು ಬಂದ್ರೂ ಭಾಷಣ ಮಾಡಿ ಹೋಗ್ತಾರೆ ಅಷ್ಟೇ. ಬಿಜೆಪಿ ಮತ್ತು ಕಾಂಗ್ರೆಸ್‌ ಪ್ರಚಾರ ಯಾವತ್ತೂ ಜೆಡಿಎಸ್‌ಗೆ ಸಮವಾಗುವುದಿಲ್ಲ. ನಾನು ನಾಲ್ಕು ತಿಂಗಳಿನಿಂದ ನಡೆಸಿದ ರೋಡ್‌ ಶೋ ಮುಂದೆ ಇದು ಏನೂ ಅಲ್ಲ. ಮಂಡ್ಯ, ಮೈಸೂರಿನಿಂದ ಜನರನ್ನು ಕರೆಸುತ್ತಾರೆ. ಹಾಗಾಗಿ ಇದು ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ರೀತಿಯಾಗಿದೆ. ಮೋದಿ ಪ್ರಚಾರದಿಂದ ನನಗೆ ಯಾವುದೇ ಆತಂಕವಿಲ್ಲ. ಜನ ಸೇರಿಸಿ ಒಂದು ಜಾತ್ರೆ ಮಾಡಿ ಹೋಗುತ್ತಾರೆ ಅಷ್ಟೇ ಎಂದು ಹೆಚ್‌ಡಿಕೆ ಟಾಂಗ್ ನೀಡಿದ್ದಾರೆ. 

ಇದನ್ನೂ ವೀಕ್ಷಿಸಿ: ನಾನು ವಿಶ್ರಾಂತಿ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿಲ್ಲ: ಹೆಚ್‌ಡಿಕೆ

Related Video