‘ಬಿಜೆಪಿಗೆ ನೈತಿಕತೆ ಇದ್ರೆ ಅನರ್ಹರಿಗೆ ಯಾವುದೇ ಕಾರಣಕ್ಕೂ ಟಿಕೇಟ್ ನೀಡ್ಬಾರದು’

: ಕಾಂಗ್ರೆಸ್ ಹಾಗೂ ಜೆಡಿಎಸ್ ಅನರ್ಹ ಶಾಸಕರ ತೀರ್ಪು ಹೊರಬಿದ್ದಿದ್ದು, ಅನರ್ಹರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ಇದರಿಂದ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಕಾವು ರಂಗೇರಿದೆ.  ಮತ್ತೊಂದೆಡೆ ಬಿಜೆಪಿಗೆ ನೈತಿಕತೆ ಇದ್ದರೆ ಅನರ್ಹರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

First Published Nov 13, 2019, 4:25 PM IST | Last Updated Nov 13, 2019, 4:25 PM IST

ರಾಯಚೂರು, [ನ.13]: ಕಾಂಗ್ರೆಸ್ ಹಾಗೂ ಜೆಡಿಎಸ್ ಅನರ್ಹ ಶಾಸಕರ ತೀರ್ಪು ಹೊರಬಿದ್ದಿದ್ದು, ಅನರ್ಹರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ಇದರಿಂದ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಕಾವು ರಂಗೇರಿದೆ. 

ಮತ್ತೊಂದೆಡೆ ಬಿಜೆಪಿಗೆ ನೈತಿಕತೆ ಇದ್ದರೆ ಅನರ್ಹರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇಂದು ರಾಯಚೂರಿನಲ್ಲಿ ಮಾತನಾಡಿದ ಅವರು, ಆನರ್ಹ ಶಾಸಕರ ಕುರಿತ ಸುಪ್ರೀಂ ಕೋರ್ಟ್ ನೀಡಿರೋ ಆದೇಶವನ್ನ ಸ್ವಾಗತಿಸುತ್ತೇನೆ. ಅತೃಪ್ತ ಶಾಸಕರು ಅನರ್ಹರಾಗಿದ್ದಾರೆ. ಈ ಶಾಸಕರು ದುರುದ್ದೇಶದಿಂದ ಸರ್ಕಾರ ಬೀಳಿಸಲು ಷಡ್ಯಂತ್ರ ರೂಪಿಸಿದ್ದರು ಅನ್ನೋದು ಸಾಬೀತಾಗಿದೆ ಎಂದರು.  ಇನ್ನು ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ಅವರ ಬಾಯಿಂದಲೇ ಕೇಳಿ....