Asianet Suvarna News Asianet Suvarna News

ಕನಕಾಧಿಪತಿ ಮೇಲೆ ಬಿದ್ದಿದೆ ವಿರೋಧಿ ಪಡೆಯ ವಕ್ರದೃಷ್ಠಿ..! ಆ ಕಣ್ಣಿಗೆ ರೆಪ್ಪೆಯಾಗಿ ಕಾವಲು ಕಾಯ್ತಿರೋ ಕಟ್ಟಪ್ಟ ಯಾರು..?

ಹೆಜ್ಜೆ ಹೆಜ್ಜೆಗೂ ಬಂಡೆಯನ್ನು ಹಿಂಬಾಲಿಸುತ್ತಿದೆ ‘ಆ'ಕಣ್ಣು..!
ಅಣ್ಣನ ಬೆನ್ನು ಬಿದ್ದ ಕಣ್ಣಿನ ವಿರುದ್ಧ ಸಿಡಿದೆದ್ದ ಸಹೋದರ..!
ಕನಕಪುರ ಬಂಡೆ ವಿರುದ್ಧ ದಂಡು ಕಟ್ಟಿದ್ದೇಕೆ ದುಷ್ಮನ್ ಪಡೆ..?

ಡಿಕೆ ಶಿವಕುಮಾರ್ ಆಕ್ರಮಣಕಾರಿ ರಾಜಕಾರಣಕ್ಕೆ ಹೆಸರಾದವರು. ರಾಜಕೀಯದಲ್ಲಿ ನುಗ್ಗಿ ಹೊಡೆಯೋದು ಡಿಕೆ ಸಾಹೇಬನ ಟ್ರೇಡ್ ಮಾರ್ಕ್. ಕಾಂಗ್ರೆಸ್ (Congress) ಪಕ್ಷದಲ್ಲೀಗ ಡಿಕೆಶಿ (DK Shivakumar) ತುಂಬಾನೇ ಪವರ್ ಫುಲ್. ರಾಜ್ಯಕ್ಕೆ ಉಪಮುಖ್ಯಮಂತ್ರಿ, ಪಕ್ಷಕ್ಕೆ ಅಧ್ಯಕ್ಷ. ದೇವೇಗೌಡರ ಕುಟುಂಬವನ್ನೇ ಎದುರು ಹಾಕಿಕೊಂಡು ರಾಜಕಾರಣ ಮಾಡ್ತಾ ಬಂದಿರೋ ಗಟ್ಟಿಗ ಡಿಕೆ ಶಿವಕುಮಾರ್. ಇಂಥಾ ಗಟ್ಟಿಗನಿಗೆ ಮತ್ತೆ ಶತ್ರು ಕಾಟ ಶುರುವಾಗಿದೆ. ಕನಕಪುರದ ಸುಲ್ತಾನ ಡಿಕೆ ಶಿವಕುಮಾರ್ ಅವರಿಗೆ ಇರೋ ಶತ್ರುಗಳು ಒಬ್ಬಿಬ್ರಲ್ಲ. ಸ್ಟ್ರಾಂಗ್ ಇರೋರಿಗೆ ಶತ್ರುಗಳು ಜಾಸ್ತಿ ಅಂತ ಡಿಕೆಶಿ ಆಗಾಗ ಹೇಳ್ತಾ ಇರ್ತಾರೆ. ಡಿಕೆ ಕನಕಪುರ ಬಂಡೆಗೆ ಬಿಜೆಪಿ(BJP)-ಜೆಡಿಎಸ್‌ನಲ್ಲಿ(JDS) ರಾಜಕೀಯ ಶತ್ರುಗಳಿದ್ದಾರೆ. ವೈಯಕ್ತಿಕವಾಗಿ ದ್ವೇಷ ಮಾಡೋರೂ ಇದ್ದಾರೆ. ಆದ್ರೆ ಈಗ ಕಾಂಗ್ರೆಸ್ ಕಟ್ಟಪ್ಪನಿಗೆ ಶುರುವಾಗಿರೋ ಶತ್ರು ಕಾಟ ಬಿಜೆಪಿಯಿಂದ್ಲೂ ಅಲ್ಲ, ಜೆಡಿಎಸ್‌ನಿಂದ್ಲೂ ಅಲ್ಲ. ಇದು ಔಟ್ ಆ್ಯಂಡ್ ಔಟ್ ಕಾಂಗ್ರೆಸ್ ಕೋಟೆಯೊಳಗೆ ಡಿಕೆ ವಿರುದ್ಧ ಎದ್ದು ನಿಂತಿರೋ ದುಷ್ಮನಿ. ಆ ದುಷ್ಮನಿಯಲ್ಲಿ ಅದೊಂದು ಕಣ್ಣು ಡಿಕೆ ಶಿವಕುಮಾರ್ ಅವರನ್ನು ನೆರಳಿನ ಹಾಗೆ ಹಿಂಬಾಲಿಸ್ತಾ ಇದೆ. ಹೆಜ್ಜೆ ಹೆಜ್ಜೆಗೂ ಕಾಡ್ತಾ ಇದೆ, ಪ್ರಶ್ನೆ ಕೇಳ್ತಾ ಇದೆ, ಸವಾಲ್ ಹಾಕ್ತಾ ಇದೆ.

ಇದನ್ನೂ ವೀಕ್ಷಿಸಿ:  Valmiki Development Corporation scam: ಸರ್ಕಾರದ ದುಡ್ಡು ಕದ್ದೋರು ಯಾರು..? ವಾಪಸ್ ಬಂದಿದ್ದು ಎಷ್ಟು..?

Video Top Stories