Asianet Suvarna News Asianet Suvarna News

Valmiki Development Corporation scam: ಸರ್ಕಾರದ ದುಡ್ಡು ಕದ್ದೋರು ಯಾರು..? ವಾಪಸ್ ಬಂದಿದ್ದು ಎಷ್ಟು..?


ತನ್ನ ಗೆಳೆಯನ ಮನೆಯಲ್ಲಿ ಚೀಲದಲ್ಲಿ ತುಂಬಿಟ್ಟಿದ್ದ ಪದ್ಮನಾಭ್..!
ಹಗರಣದ ದುಡ್ಡಲ್ಲಿ ಹೈಫೈ ಲೈಫ್ ಲೀಡ್ ಮಾಡ್ತಿದ್ದ ಖದೀಮರು 
ನೆಕ್ಕುಂಡಿ ನಾಗರಾಜ್ ಬಾಮೈದುನನಿಂದ 1.5 ಕೋಟಿ ರೂ ಸೀಜ್

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ (Valmiki Development Corporation scam) ಗ್ಯಾರಂಟಿ ಸರ್ಕಾರಕ್ಕೆ ತಲೆನೋವಾಗಿದೆ. ಈ ನಿಗಮದ ಹಣವನ್ನು ದರೋಡೆ ಮಾಡಿರುವ ಬರೋಬ್ಬರಿ 11 ಜನರನ್ನು ಎಸ್‌ಐಟಿ (SIT) ಟೀಂ ಬಂಧಿಸಿದೆ. ಅಲ್ಲದೇ ಕದ್ದಿರುವ ಹಣವನ್ನು ಅಕೌಂಟ್‌ ಫ್ರೀಜ್‌ ಮಾಡಿ ವಶಕ್ಕೆ ಪಡೆದಿದೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಚಂದ್ರಶೇಖರ್‌ ಆತ್ಮಹತ್ಯೆಗೂ (Chandrashekhar suicide) ಮುನ್ನ ಮೂರು ಜನರ ಹೆಸರನ್ನು ಬರೆದು, ಬಹುಕೋಟಿ ಹಗರಣ ನಡೆದಿದೆ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದರು. 10 ಕೋಟಿ ರೂಪಾಯಿಯನ್ನು ಎಸ್‌ಐಟಿ ವಶಕ್ಕೆ ಪಡೆದಿದೆ. ಅಲ್ಲದೇ ಎಸ್‌ಐಟಿ ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ.

ಇದನ್ನೂ ವೀಕ್ಷಿಸಿ:  Tumakuru Crime News: ಕೆರೆಯೊಂದರಲ್ಲಿ ಪತ್ತೆಯಾಯ್ತು ಜೋಡಿ ಶವ..! ವಯಸ್ಕನ ಜೊತೆ ಯುವತಿ ಸಾವಿಗೆ ಶರಣಾಗಿದ್ಯಾಕೆ..?