Asianet Suvarna News Asianet Suvarna News

Karnataka Politics: ಬಿಜೆಪಿ ಹಾಲಿ 120 ಶಾಸಕರ ಪೈಕಿ 15 ಶಾಸಕರಿಗೆ ಸೋಲಿನ ಭೀತಿ

ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರದ ಸಿದ್ದತೆ ಆರಂಭಿಸಿದ್ದು, ಚುನಾವಣೆ ಫಲಿತಾಂಶಕ್ಕೆ ಈಗಿನಿಂದಲೇ ಲೆಕ್ಕಾಚಾರ ಮಾಡುತ್ತಿದೆ. ಈ ಬೆನ್ನಲ್ಲೇ ಕೇಸರಿ ಪಾಳಯ ವಿವಿಧ ಹಂತದ ಸರ್ವೆ ಮಾಡಿದ್ದು, ಈ ಸರ್ವೆ ಆಧರಿಸಿಯೇ ಟಿಕೆಟ್‌ ಹಂಚಿಕೆ ಆಗಲಿದೆ ಎನ್ನಲಾಗಿದೆ.
 

ಬೆಂಗಳೂರು (ಜೂನ್ 25): ರಾಜ್ಯ ರಾಜಕೀಯದ (State Politicss) ಬಿಗ್ ಎಕ್ಸ್‌ಕ್ಲೂಸಿವ್‌ ಸುದ್ದಿ ಇದಾಗಿದ್ದು, ಹಲವು ಶಾಸಕರು ಬಿಜೆಪಿಯ (BJP) ಆತಂರಿಕ ಸರ್ವೇಯ ಅಭಿಪ್ರಾಯ ಕಂಡು ತಲೆಕೆಡಿಸಿಕೊಂಡಿದ್ದಾರೆ. ಕೇಸರಿ ಪಾಳಯ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಕನಿಷ್ಠ 15 ಹಾಲಿ ಶಾಸಕರು ಮುಂಬರುವ ಚುನಾವಣೆಯಲ್ಲಿ ಸೋಲು ಕಾಣಲಿದ್ದಾರೆ ಎಂದು ಹೇಳಲಾಗಿದೆ.

ಮುಂದಿನ ವಿಧಾನಸಭೆಗೆ (karnataka assembly election) ಇನ್ನು 9 ತಿಂಗಳು ಬಾಕಿ ಇವೆ. ಈಗಾಗಲೇ ಹಾಲಿ ಶಾಸಕರು ಮುಂದಿನ ಚುನಾವಣೆಗೆ ಟಿಕೆಟ್‌ನ ಲೆಕ್ಕಾಚಾರ ಆರಂಭಿಸಿದೆ. ಇದರಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ರಾಜ್ಯ ಬಿಜೆಪಿ ಈಗಾಗಲೇ ಆಂತರಿಕ ಸರ್ವೇ ನಡೆಸಿದ್ದು, 120 ಶಾಸಕರ ಪೈಕಿ ಕನಿಷ್ಠ 15 ಶಾಸಕರು ಸೋಲು ಕಾಣುವ ಭೀತಿ ಇದೆ.

ಯುವ ಕಾಂಗ್ರೆಸ್‌ ಪ್ರತಿಭಟನೆ ವೇಳೆ ಹೈಡ್ರಾಮಾ: ಬಿಜೆಪಿ ವಿರುದ್ಧ ಕಾರ್ಯಕರ್ತರ ಧಿಕ್ಕಾರ

ಆಡಳಿತಾರೂಢ ಬಿಜೆಪಿಯಲ್ಲೀಗ ಈಗ ಚುನಾವಣಾ ರಣತಂತ್ರ ಆರಂಭವಾಗಿದ್ದು, ವಿವಿಧ ಹಂತದಲ್ಲಿ ಬಿಜೆಪಿ ಚುನಾವಣಾ ಸರ್ವೇ ನಡೆಸಿದ್ದು, ಇದರಲ್ಲಿ ಬಂದ ಮಾಹಿತಿಯ ಆಧಾರದಲ್ಲಿಯೇ ಮುಂದಿನ ಚುನಾವಣೆಗೆ ಟಿಕೆಟ್‌ ಹಂಚಿಕೆಯಾಗಲಿದೆ ಎನ್ನಲಾಗಿದೆ.

Video Top Stories