ಕುಕ್ಕರ್ ಅಂತೆ ಕುಕ್ಕರ್ ಎಂದ ಡಿಕೆ ಶಿವಕುಮಾರ್‌ ತಲೆಗೆ ಚಕ್ಕರ್ ಎಂದ ಬಿಜೆಪಿ!

ಉಗ್ರನ ಪರ ಹೇಳಿಕೆ ಸಮರ್ಥಿಸಿದ ಡಿಕೆ ಶಿವಕುಮಾರ್, ಡಿಕೆಶಿ ಪರ ನಿಂತ ಪ್ರಿಯಾಂಕ್ ಖರ್ಗೆ , ಶಾರೀಖ್‌ನನ್ನು ಅಮಾಯಕ ಎಂದು ಹೇಳಿ, ಉಗ್ರ ಹೇಳಬೇಡಿ, ಕಾಂಗ್ರೆಸ್ ಸೇರಿದಂತೆ ಇಂದಿನ ಇಡೀ ದಿನದ ಕಂಪ್ಲೀಟ್ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಮಂಗಳೂರು ಸ್ಫೋಟ ಪ್ರಕರಣ ಯಾವನೋ ಅಬ್ಬ ಸಣ್ಣ ತಪ್ಪು ಮಾಡಿದ್ದಾನೆ ಅಷ್ಟೆ. ಇದು ಪುಲ್ವಾಮ ರೀತಿ ದಾಳಿನಾ? ಮುಂಬೈ ರೀತಿ ದಾಳಿನಾ? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದರು. ಇದೀಗ ತನ್ನ ಹೇಳಿಕೆಯನ್ನು ಡಿಕೆಶಿ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಭ್ರಷ್ಟಾಚಾರ ಮುಚ್ಚಿಹಾಕಲು ಇಂತಹ ಘಟನೆಗಳು ಬೆಳಕಿಗೆ ಬರುತ್ತವೆ ಎಂದು ಮಂಗಳೂರು ಸ್ಫೋಟ ನಕಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರ. ಇತ್ತ ಮಧು ಬಂಗಾರಪ್ಪ ಹೇಳಿಕೆ ಕಾಂಗ್ರೆಸ್‌ನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಸ್ಫೋಟ ಬಿಜೆಪಿ ಮಾಡಿಸಿದೆಯಾ ಅನ್ನೋದು ತನಿಖೆಯಾಗಲಿದೆ ಎಂದಿದ್ದಾರೆ.ಮಂಗಳೂರು ಸ್ಫೋಟದಲ್ಲಿ ಬಂಧಿತನಾಗಿರುವ ಉಗ್ರ ಶಾರೀಖ್‌ನನ್ನು ಅಮಾಯಕ ಎಂದು ಹೇಳಿ. ಕೋರ್ಟ್ ಶಾರೀಖ್‌ನ ಕುರಿತ ತೀರ್ಪುು ನೀಡಿಲ್ಲ. ಹೀಗಾಗಿ ಶಾರೀಖ್ ಸದ್ಯ ಉಗ್ರನಲ್ಲ, ಅಮಾಯಕ ಎಂದು ಕಾಂಗ್ರೆಸ್ ನಾಯಕರ ಮಾತಿಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.ಕುಕ್ಕರ್ ಬ್ಲಾಸ್ಟ್ ಅಂತೆ, ಕುಕ್ಕರ್ ಬ್ಲಾಸ್ಟ್ ಎಂದು ಡಿಕೆ ಶಿವಕುಮಾರ್ ಹೇಳಿಕೆಗೆ ಬಾರಿ ಆಕ್ರೋಶ ವ್ಯಕ್ತವಾಗಿದೆ. ಮಂಗಳೂರು ಸ್ಫೋಟ ಬಿಜೆಪಿ ವಿಷಯ ಬದಲಿಸಲು ಮಾಡಿದ ಕುತಂತ್ರ ಎಂದಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video